ಬೆಂಗಳೂರು: ನಿನ್ನೆ ಸಂಜೆಯಿಂದ ಬೆಂಗಳೂರಿನಲ್ಲಿ ಬಾರೀ ಮಳೆ. ಆರ್ಸಿಬಿ ಪಂದ್ಯದ ವೇಳೆ ಮಳೆಯಾಟ ಜೋರಾಗಿತ್ತು. ಒಮ್ಮೊಮ್ಮೆ ಮಳೆ ಬಂದು ಬಂದು ನಿಲ್ಲುತ್ತಿತ್ತು. ಇದರಿಂದ ಆರ್ಸಿಬಿ ಅಭಿಮಾನಿಗಳಿಗೆ ಬೇಸರವೂ ಆಗಿತ್ತು. ಆದ್ರೆ ಆರ್ಸಿಬಿ ಕೊಟ್ಟ ಟಾರ್ಗೆಟ್ ಗುರಿಯನ್ನು ರೀಚ್ ಮಾಡಲು ಸಿಎಸ್ಕೆ ತಿಣುಕಾಡಿತು ನೋಡಿ, ಆರ್ಸಿಬಿ ಫ್ಯಾನ್ಸ್ ಹರ್ಷೋದ್ಘಾರ ನಿಲ್ಲಲೇ ಇಲ್ಲ. ಫೈನಲಿ ಆರ್ಸಿಬಿ ಪ್ಲೇ ಆಫ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ.
ಟಾಸ್ ಸೋತರೂ ಫಸ್ಟ್ ಬ್ಯಾಟಿಂಗ್ ಮಾಡಿದ ಆರ್ಸಿಬಿ ಪರ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ತಾನು ಆಡಿದ 29 ಬಾಲ್ನಲ್ಲಿ ಬರೋಬ್ಬರಿ 4 ಸಿಕ್ಸರ್ ಜತೆಗೆ 3 ಫೋರ್ ಸಿಡಿಸಿದ್ರು. ಬರೋಬ್ಬರಿ 47 ರನ್ ಸಿಡಿಸಿದರು. ಫಾಫ್ ಡುಪ್ಲೆಸಿಸ್ 39 ಬಾಲ್ನಲ್ಲಿ 3 ಸಿಕ್ಸರ್, 3 ಫೋರ್ ಸಮೇತ 54 ರನ್ ಚಚ್ಚಿದ್ರು. ಆದ್ರೆ, ರಜತ್ ಪಾಟಿದಾರ್ ಹೊಡೆತಕ್ಕೆ ಬೈ ಮಿಸ್ ಆಗಿ ರನ್ ಔಟ್ ಆಗಿದ್ದಾರೆ. ಈ ಮೂಲಕ ಚೆನ್ನೈಗೆ 219 ರನ್ ಗಳ ಟಾರ್ಗೆಟ್ ನೀಡಲಾಗಿತ್ತು.
ಚೆನ್ನೈ ಅದರ ಬೆನ್ನತ್ತಿ ಆಟವಾಡಲು ಶುರು ಮಾಡಿತ್ತು. ಚೆನ್ನೈ ಸೂಪರ್ ಕಿಂಗ್ಸ್ ಪರ ಓಪನರ್ ಆಗಿ ಬಂದ ರುತುರಾಜ್ ಗಾಯಕ್ವಾಡ್ ಡಕೌಟ್ ಆದ್ರು. ರಾಚಿನ್ ರವೀಂದ್ರ ತಾನು ಆಡಿದ 37 ಬಾಲ್ನಲ್ಲಿ 3 ಭರ್ಜರಿ ಸಿಕ್ಸರ್, 5 ಫೋರ್ ಸಮೇತ 61 ರನ್ ಸಿಡಿಸಿ ವಿಕೆಟ್ ಒಪ್ಪಿಸಿದ. ರಹಾನೆ 33, ಜಡೇಜಾ 42, ಎಂ.ಎಸ್ ಧೋನಿ 25 ರನ್ ಹೊಡೆದ್ರು. ಚೆನ್ನೈ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿದೆ. ಆರ್ಸಿಬಿ ಚೆನ್ನೈ ವಿರುದ್ಧ 27 ರನ್ನಿಂದ ಗೆದ್ದು ಪ್ಲೇ ಆಫ್ಗೆ ಕ್ವಾಲಿಫೈ ಆಗಿದೆ.