ಸುದ್ದಿಒನ್, ಮೊಳಕಾಲ್ಮೂರು, ಮೇ. 06 : ರಾಜ್ಯದಲ್ಲಿ RCB ಅಭಿಮಾನಿಗಳು ಕಡಿಮೆ ಏನಿಲ್ಲ. ಕ್ರೇಜ್ ಸಿಕ್ಕಾಪಟ್ಟೆ ಇದೆ. ಕಪ್ ಗೆಲ್ಲದೆ ಇದ್ದರು ಭರವಸೆಯನ್ನಂತು ಕಳೆದುಕೊಂಡಿಲ್ಲ. ಈ ಸಲ ಕಪ್ ನಮ್ಮದೇ ಅಂತ ಮತ್ತೆ ಮತ್ತೆ ನಂಬಿಕೆ ಇಟ್ಟು ಕಾಯುತ್ತಾ ಇರುತ್ತಾರೆ. ಅದರಲ್ಲೂ ಪ್ರತಿಯೊಂದು ಮ್ಯಾಚ್ ಅನ್ನು RCB ಗೆದ್ದಾಗಲೂ ಅಭಿಮಾನಿಗಳು ಎಂಜಾಯ್ ಮಾಡುವ ರೀತಿ ನೋಡಿದರೆ ಕ್ರಿಕೆಟ್ ಅಭಿಮಾನಿಗಳು ಅಲ್ಲದೆ ಹೋದರು ಅವರ ಕ್ರೇಜ್ ನೋಡಿ ಅಭಿಮಾನಿಗಳಾಗಿ ಬಿಡ್ತಾರೆ.
ಇದೀಗ ಅಂಥದ್ದೇ ಜೋಶ್ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನಲ್ಲಿ ಕ್ರಿಕೆಟ್ ಅಭಿಮಾನಿಗಳು ತೋರಿಸಿದ್ದಾರೆ. ಆರ್ಸಿಬಿ ಗೆದ್ದ ಖುಷಿಯಲ್ಲಿ ಸಾರ್ವಜನಿಕವಾಗಿ ಮೇಕೆ ಬಲಿ ಕೊಟ್ಟಿದ್ದಾರೆ. ಈ ಸಂಬಂಧ ಮೊಳಕಾಲ್ಮೂರು ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಪ್ರಾಣಿ ಹಿಂಸೆಯಡಿ ಕೇಸ್ ದಾಖಲಿಸಿಕೊಂಡಿದ್ದಾರೆ. ಕಳೆದ ಮೇ 5ರಂದು RCB ವರ್ಸಸ್ CSK ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಜೀವ ಕೈಗೆ ಬರಿಸಿದ್ದ ಆರ್ಸಿಬಿ ಕೊನೆಗೆ ಗೆದ್ದಿತ್ತು. ಇಡೀ ಆರ್ಸಿಬಿ ಫ್ಯಾನ್ಸ್ ಇನ್ನೇನು ಮುಗಿದೇ ಹೋಯ್ತು ಅಂತ ಅಂದುಕೊಳ್ಳುತ್ತಿದ್ದರು. ಆದರೆ ಕಡೆಗೂ ಆರ್ಸಿಬಿ ವಿನ್ ಆಯ್ತು. ಆ ಟೆನ್ಶನ್ ನಿಂದ ಖುಷಿಯ ಕ್ಷಣವನ್ನ ಆಚರಿಸಿದ್ದು ಕಡಿಮೆ ಏನಲ್ಲ.
ಇಂಥದ್ದೇ ಖುಷಿಯಲ್ಲಿ ಮೊಳಕಾಲ್ಮೂರು ತಾಲೂಕಿನ ಮಾರಮ್ಮನಹಳ್ಳಿಯ ಯುವಕರು ಪ್ರಾಣಿ ಬಲಿ ಕೊಟ್ಟು ಸೆಲೆಬ್ರೇಟ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಅವರ ಪೋಸ್ಟರ್ ಮುಂದೆ ಮೇಕೆಯನ್ನ ಬಲಿ ಕೊಟ್ಟಿದ್ದಾರೆ. ಕೊಹ್ಲಿ ಫೋಟೋಗೆ ರಕ್ತಾಭಿಷೇಕ ಮಾಡಿದ್ದಾರೆ. ವಿಚಾರ ವೈರಲ್ ಆಗುತ್ತಿದ್ದಂತೆ ಸೋಮವಾರ ಸ್ಥಳಕ್ಕೆ ಬಂದ ಪಿಎಸ್ಐ ಜಿ ಪಾಂಡುರಂಗ ಅವರು ಸಿಬ್ಬಂದಿ ಕರೆದುಕೊಂಡು ಬಂದು ಸ್ಥಳ ಪರಿಶೀಲನೆ ನಡೆಸಿ, ಸಣ್ಣ ಪಾಲಯ್ಯ, ಜಯಣ್ಣ, ತಿಪ್ಪೇಸ್ವಾಮಿ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
