RCBಯ ಭಿಕ್ಷೆ ಬೇಕಿಲ್ಲ..ಕೋಟಿ ಪರಿಹಾರ ಕೊಡಲಿ : ವಿಜಯೇಂದ್ರ ಆಗ್ರಹ..!

ಬೆಂಗಳೂರು; ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತದ ಘಟನೆಯಿಂದಾಗಿ ರಾಜ್ಯದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಸತ್ತವರ ಕುಟುಂಬಕ್ಕೆ ಆರ್ಸಿಬಿ ಕೂಡ ಹತ್ತು ಲಕ್ಷ ಪರಿಹಾರವನ್ನ ಘೋಷಣೆ ಮಾಡಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಆಕ್ರೋಶ ಹೊರ ಹಾಕಿದ್ದಾರೆ.

 

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಮಾಯಕ ಪೊಲೀಸರನ್ನ ಟಾರ್ಗೆಟ್ ಮಾಡೋದು ಬಿಟ್ಟು, ಹರಕೆಯ ಕುರಿ ಮಾಡೋದು ಬಿಟ್ಟು, ಇಂಟೆಲಿಜೆನ್ಸ್ ಫೇಲ್ಯೂರ್ ಆಗಿದೆ. ಇವತ್ತು ಇಂಟೆಲಿಜೆನ್ಸ್ ಡಿಪಾರ್ಟ್ಮೆಂಟ್ ನಲ್ಲಿ ಇರುವಂತವರು ಇರೋದು ಮುಖ್ಯಮಂತ್ರಿಗಳ ಜೊತೆಗೆ. ಇತ್ತೀಚೆಗೆ ರೇವ್ ಪಾರ್ಟಿ ನಡೀತು. ಆ ಪಾರ್ಟಿ ನಡೆದಾಗ ಫಾರ್ಮ ಹೌಸ್ ಮಾಲೀಕರನ್ನ ಅರೆಸ್ಟ್ ಮಾಡಿದ್ದೀರಿ, ಅದರಲ್ಲಿ ಭಾಗಿಯಾದವರನ್ನು ಅರೆಸ್ಟ್ ಮಾಡಿದ್ದೀರಿ. ಈ ಕೇಸಲ್ಲಿ ಅನುಮತಿ ಇಲ್ಲದೆ ಮೆರವಣಿಗೆ ಮಾಡ್ತೀರಿ ಅಂದ್ರೆ, ಸರ್ಕಾರದವರು ಮೆರವಣಿಗೆ ಮಾಡ್ತೀರಿ ಅಂದ್ರೆ ಮುಖ್ಯಮಂತ್ರಿಗಳು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು.

ಹೈಕೋರ್ಟ್ ನ್ಯಾಯಾಧೀಶರಿಂದ ಯಾಕೆ ತನಿಖೆ ಮಾಡಿಸ್ತಾ ಇದ್ದೀರಿ. ಸಿಟ್ಟಿಂಗ್ ಜಡ್ಜ್ ಕಡೆಯಿಂದ ಯಾಕೆ ತನಿಖೆ ಮಾಡಿಸ್ತಾ ಇಲ್ಲ. ನಿಮಗೆ ಬೇಕಾದಂತೆ ವರದಿ ಬರಬೇಕು, ನಿಮಗೆ ತೊಂದರೆಗಳು ಆಗಬಾರದು, ಅಧಿಕಾರಿದಿಂದ ಮೆರೆಯಬೇಕು. ಅಧಿಕಾರಿಗಳ ಮೇಲೆ ಗೂಬೆ ಕೂರಿಸಿ ನೀವೂ ಮೆರೆಯಬೇಕಾ..?ನಿವೃತ್ತ ನ್ಯಾಯಾಧೀಶರಿಂದ ತನಿಖೆ ಮಾಡಿಸುವುದನ್ನು ಬದಿಗಿಟ್ಟು, ಸಿಟ್ಟಿಂಗ್ ಹೈಕೋರ್ಟ್ ಜಡ್ಜ್ ಕಡೆಯಿಂದಾನೇ ತನಿಖೆಯಾಗಬೇಕು.

ಆರ್ಸಿಬಿ ಏನು ಹತ್ತು ಲಕ್ಷ ಕೊಡ್ತೀನಿ ಅಂತ ಹೇಳಿದೆ, ಯಾಕೆ ಕೋಟಿ ಕೋಟಿ ಲಾಭ ಪಡೆದುಕೊಂಡು ಏನು ಭಿಕ್ಷೆ ಕೊಡ್ತಾ ಇದೆಯಾ ಹತ್ತು ಲಕ್ಷ. ನಾನು ಇವತ್ತು ಆರ್ಸಿಬಿಗೆ ಆಗ್ರಹ ಮಾಡ್ತಾ ಇದ್ದೇನೆ. ಮೃತ ಕುಟುಂಬಕ್ಕೆ ಒಂದು ಕೋಟಿಯನ್ನ ಪರಿಹಾರವನ್ನು ನೀಡಬೇಕೆಂದು ಆಗ್ರಹ ಮಾಡ್ತೇನೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks