ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನೂತನ ನಾಯಕನಾಗಿ ನಿರೀಕ್ಷೆಯಂತೆ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಮಾಜಿ ನಾಯಕ ಹಾಗೂ ಸಿಎಸ್‌ಕೆ ತಂಡದ ಮಾಜಿ ಓಪನರ್ ಫಫ್ ಡುಪ್ಲೆಸಿಸ್
ಅವರನ್ನು ಬೆಂಗಳೂರು ಫ್ರಾಂಚೈಸಿ ನೇಮಕ ಮಾಡಿದೆ.
ಬೆಂಗಳೂರಿನಲ್ಲಿ ನಡೆದ “ಆರ್‌ಸಿಬಿ ಆನ್‌ಬಾಕ್ಸ್” ಕಾರ್ಯಕ್ರಮದಲ್ಲಿ ಬೆಂಗಳೂರು ಫ್ರಾಂಚೈಸಿ ಇದನ್ನು ಬಹಿರಂಗಪಡಿಸಿದೆ. ವಿರಾಟ್ ಕೊಹ್ಲಿ 2013 ರಿಂದ 2021ರವರೆಗೆ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ನಾಯಕರಾಗಿದ್ದರು.
https://twitter.com/RCBTweets/status/1502603973848494087?t=mCLA8bgbh2Idg8tfLbf-6A&s=19
RCB ನಾಯಕತ್ವದಿಂದ ಕೆಳಗಿಳಿದಿದ್ದಾರೆ ಎಂದು ತಿಳಿದುಬಂದಿದೆ. ಈ ಕ್ರಮದಲ್ಲಿ ಕೊಹ್ಲಿ ಮತ್ತೆ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
IPL-2022 ಮೆಗಾ ಹರಾಜಿನಲ್ಲಿ RCB ಫಫ್ ಡುಪ್ಲೆಸಿಸ್ ಅವರನ್ನು 7 ಕೋಟಿ ರೂಪಾಯಿಗೆ ಖರೀದಿಸಿದ್ದರು. ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ಪರ ಡು ಪ್ಲೆಸಿಸ್ ಅವರು ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದರು.
ಐಪಿಎಲ್-2021ರ ಆವೃತ್ತಿಯಲ್ಲಿ ಡು ಪ್ಲೆಸಿಸ್ 633 ರನ್ ಗಳಿಸುವ ಮೂಲಕ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಕಳೆದ ವರ್ಷ ಚೆನ್ನೈ ಪ್ರಶಸ್ತಿ ಗೆಲ್ಲುವಲ್ಲಿ ಡು ಪ್ಲೆಸಿಸ್ ಪ್ರಮುಖ ಪಾತ್ರ ವಹಿಸಿದ್ದರು. ಅವರು 37 ಟಿ20 ಪಂದ್ಯಗಳಿಗೆ ತಂಡದ ನಾಯಕತ್ವ ವಹಿಸಿ, 23 ಪಂದ್ಯಗಳನ್ನು ಗೆದ್ದಿದ್ದರು.
ಐಪಿಎಲ್ 2022 ಈ ಆವೃತ್ತಿಯಲ್ಲಿ ಮಾರ್ಚ್ 26ರಂದು ಆರಂಭವಾಗಲಿದ್ದು, ಮಾ.27 ರಂದು ಪಂಜಾಬ್ ಕಿಂಗ್ಸ್ ಎದುರು ಪಂದ್ಯ ನಡೆಯಲಿದೆ.