ಸಾಲಗಾರರಿಗೆ RBI ಸಿಹಿ ಸುದ್ದಿ ; ಯಾವೆಲ್ಲ ಸಾಲದ ಮೇಲೆ ಸಿಕ್ತು ರಿಯಾಯಿತಿ..?

ಆರ್ಬಿಐ ಕಡೆಯಿಂದ ಇಂದು ಸಾಲ ಪಡೆದ ಸಾಲಗಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಸತತ ಎರಡನೇ ಬಾರಿಗೆ 25 ಬೇಸಿಸ್ ಪಾಯಿಂಟ್ ರೆಪೋ ದರ ಇಳಿಕೆ ಮಾಡಿದೆ. ಇದು ಸಾಲಗಾರರಿಗೆ ಒಂದು ರೀತಿಯಲ್ಲಿ ಸಂತಸ ನೀಡಿದೆ. ಜಾಗತಿಕ ತಲ್ಲಣ, ಷೇರುಪೇಟೆ ಕುಸಿತದ ಆತಂಕದ ಮಧ್ಯೆ RBI ಮತ್ತೊಮ್ಮೆ ಈ ದಿಟ್ಟ ನಿರ್ಧಾರವನ್ನು ಕೈಗೊಂಡಿದೆ. ಆರ್ಬಿಐ ಈ ನಿರ್ಧಾರ ತೆಗೆದುಕೊಂಡಿರುವ ಹಿನ್ನೆಲೆ ಸಾಲ ಪಡೆದ ಗ್ರಾಹಕರಿಗೆ ಇದರಿಂದ ನೇರವಾಗಿಯೇ ಲಾಭವಾಗಲಿದೆ.

ಗೃಹ ಸಾಲ, ವೈಯಕ್ತಿಕ ಸಾಲ, ವಾಹನ ಸಾಲ ಪಡೆದವರು ಇದರ ಲಾಭ ಪಡೆಯಲಿದ್ದಾರೆ. ಇದರಿಂದ ಬಡ್ಡಿ ದರದಲ್ಲಿ ಇಳಿಕೆಯಾಗಲಿದೆ. ಆರ್ಬಿಐ 25 ಬೇಸಿಸ್ ಪಾಯಿಂಟ್ ರೆಪೋ ದರವನ್ನು ಇಳಿಕೆ ಮಾಡಿದೆ‌. ಇದರಿಂದ ಶೇಕಡ 6.25ರಿಂದ ಶೇಕಡ 6ಕ್ಕೆ ಇಳಿಕೆಯಾಗಿದೆ. ದೇಶದಲ್ಲಿ ಹಣದುಬ್ಬರ ನಿಯಂತ್ರಣದಲ್ಲಿದೆ ಇರುವುದರಿಂದ ರೆಪೋ ದರ ಇಳಿಕೆ ಮಾಡಲಾಗಿದೆ. ಇದರಿಂದಾಗಿ ಜನರು ಹೆಚ್ಚಿನ ಬ್ಯಾಂಕ್ ಸಾಲ ಪಡೆಯುತ್ತಾರೆ. ಜೊತೆಗೆ ಪಡೆದ ಸಾಲವನ್ನು ಖರೀದಿಗೆ ಖರ್ಚು ಮಾಡುತ್ತಾರೆ. ಇದರಿಂದಾಗಿ ಆರ್ಥಿಕತೆಯು ಚೇತರಿಕೆ ಆಗಲು ಸಾಧ್ಯ ಎಂದು ಆರ್ಬಿಐ ಗವರ್ನರ್ ಸಂಜಯ್‌ ಮಲೋತ್ರಾ ತಿಳಿಸಿದ್ದಾರೆ.

ರೆಪೋ ದರ ಅಂದ್ರೆ ಭಾರತೀಯ ರಿಸರ್ವ್ ಬ್ಯಾಂಕ್ ಸರ್ಕಾರಿ ಭದ್ರತೆಗಳ ವಿರುದ್ಧ ವಾಣಿಜ್ಯ ಬ್ಯಾಂಕುಗಳಿಗೆ ಹಣವನ್ನು ನೀಡುವ ಬಡ್ಡಿ ದರವಾಗಿದೆ. ಸತತ ಎರಡನೇ ಬಾರಿಗೆ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಇಳಿಕೆ ಮಾಡಿದೆ. ಬಡ್ಡಿ ದರ ಇಳಿಕೆ ಮಾಡುವ ನಿರ್ಧಾರವನ್ನು ಬ್ಯಾಂಕ್ ಗಳು ಗ್ರಾಹಕರಿಗೆ ಆಫರ್ ನೀಡಲಿವೆ.

Share This Article
Leave a Comment

Leave a Reply

Your email address will not be published. Required fields are marked *