ಬೆಂಗಳೂರು: ಐಪಿಎಸ್ ಆಫೀಸರ್ ರವಿ ಡಿ ಚನ್ನಣ್ಣನವರ್ ಬಗ್ಗೆ ಇತ್ತೀಚೆಗೆ ಹಲವು ಆರೋಪಗಳು ಓಡಾಡುತ್ತಿದೆ. ಆ ಬಗ್ಗೆ ತನಿಖೆ ಕೂಡ ನಡೆಯುತ್ತಿದೆ. ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾತನಾಡಿದ್ದು, ರವಿ ಡಿ ಚನ್ನಣ್ಣನವರ್ ಅವರು ಯುವ ಸಮೂಹಕ್ಕೆ ರೋಲ್ ಮಾಡೆಲ್ ಎಂದು ಹೇಳಿದ್ದಾರೆ.
ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಬಗ್ಗೆ ಕೇಳಿ ಬಂದ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ. ಯಾರು ಯಾರ ಮೇಲೆ ಬೇಕಾದರೂ ಆರೋಪ ಮಾಡಬಹುದು. ರವಿ ಚನ್ನಣ್ಣನವರ್ ಒಬ್ಬ ಪ್ರಾಮಾಣಿಕ ಅಧಿಕಾರಿ. ಅವರ ಮೇಲೆ ದೂರು ಬಂದಿರೋದ್ರಿಂದ ದೂರಿನ ಮೇರೆಗೆ ತನಿಖೆ ನಡೆಯುತ್ತಿದೆ.
ಅವರನ್ನ ವರ್ಗಾವಣೆ ಮಾಡಿರುವುದು ಶಿಕ್ಷೆ ಅಲ್ಲ. ಇದೊಂದು ಆಡಳಿತಾತ್ಮಕ ನಿರ್ಧಾರವಷ್ಟೆ. ಈ ಸಂಬಂಧ ವರ್ಗಾವಣೆ ಬೇರೆ ರೀತಿಯಲ್ಲಿ ಕೇಳಿ ಬಂದ ಹಿನ್ನೆಲೆ ಸರ್ಕಾರ ಆ ಆದೇಶವನ್ನ ತಡೆ ಹಿಡಿದಿದೆ. ಅವರೊಬ್ಬ ಎಲ್ಲರಿಗೂ ರೋಲ್ ಮಾಡೆಲ್ ರೀತಿ ಎಂದಿದ್ದಾರೆ.