ರವಿ ಬೆಳಗೆರೆ ವ್ಯಕ್ತಿಯಲ್ಲ, ಶಕ್ತಿ : ಕೊಂಡ್ಲಹಳ್ಳಿ ಮಹಾದೇವ

1 Min Read

ಸುದ್ದಿಒನ್, ಮೊಳಕಾಲ್ಮೂರು, ನವೆಂಬರ್. 14 : ತನ್ನ ಮೊನಚು ಬರವಣಿಗೆ,ಮಾತಿನ ಮೂಲಕ ನಾಡಿಗೇ ಪರಿಚಯವಾಗಿದ್ದ ‘ಅಕ್ಷರ ಬ್ರಹ್ಮ’ ರವಿ ಬೆಳಗೆರೆ ಅವರು ಕನ್ನಡ ಪತ್ರಿಕೋದ್ಯಮ ಕಂಡ ‘ಎಂದೂ ಮರೆಯದ ಮಾಣಿಕ್ಯ’ ಎಂದು ಪತ್ರಕರ್ತ ಕೊಂಡ್ಲಹಳ್ಳಿ ಅಜ್ಜಪ್ಪ ಹೇಳಿದರು.                                 

ಪಟ್ಟಣದ ಕನ್ನಡ ಭವನದಲ್ಲಿ ಗುರುವಾರ ತಾಲ್ಲೂಕು ಪತ್ರಕರ್ತರ ಸಂಘದ ವತಿಯಿಂದ ನಡೆದ ಹಿರಿಯ ಪತ್ರಕರ್ತ
ರವಿ ಬೆಳಗೆರೆ ಅವರ ನಾಲ್ಕನೇ ಪುಣ್ಯ ಸ್ಮರಣೆ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕನ್ನಡ ಸಾರಸ್ವತ ಲೋಕದಲ್ಲಿ ರವಿ ಬೆಳಗೆರೆ ಅವರದು ಅಚ್ಚಳಿಯದ ಹೆಸರು.ನಮ್ಮಂತಹ ಕಿರಿಯರಿಗೆ ಖಂಡಿತಾವಾಗಿಯೂ ಅವರು ಮಾದರಿ.’ಹಾಯ್ ಬೆಂಗಳೂರು’ ಪತ್ರಿಕೆ ಹಾಗೂ ‘ಕ್ರೈಂ ಡೈರಿ’ ಕಾರ್ಯಕ್ರಮದ ಮೂಲಕ ಕರ್ನಾಟಕದ ಮನೆ-ಮನೆಯನ್ನು ತಲುಪಿದವರು ರವಿ ಬೆಳಗೆರೆಎಂದು ಬಣ್ಣಿಸಿದರು.
ಪತ್ರಕರ್ತ ಕೊಂಡ್ಲಹಳ್ಳಿ ಮಹಾದೇವ ಮಾತನಾಡಿ ರವಿ ಬೆಳಗೆರೆ ಎಂಬುದು ವ್ಯಕ್ತಿಯಲ್ಲ.ಅದೊಂದು ಶಕ್ತಿ! ಟ್ಯಾಬ್ಲಾಯ್ಡ್ ಪತ್ರಿಕೆ
ಮುಖೇನ ಲಕ್ಷಾಂತರ ಓದುಗರನ್ನು ಸಂಪಾದಿಸಿದ ಬೆಳೆಗೆರೆ ಅವರು, ತಮ್ಮ ಸೃಜನಶೀಲ ಸಾಹಿತ್ಯದಿಂದಲೂ ಗುರುತಿಸಿಕೊಂಡವರು.ಪತ್ರಿಕಾ ರಂಗಕ್ಕೆ ಆಕರ್ಷಣೆ, ಮೌಲ್ಯವನ್ನು ತಂದುಕೊಟ್ಟ ಅವರನ್ನು ಸ್ಮರಿಸುವುದು ನಮ್ಮಂತವರಿಗೆ ಭೂಷಣಪ್ರಾಯ ಎಂದು ಅಭಿಪ್ರಾಯಪಟ್ಟರು.
ಪತ್ರಕರ್ತರಾದ ರಾಯಪುರ ಮಹಾಂತೇಶ್, ಶ್ರೀನಿವಾಸ ಮೂರ್ತಿ, ಮಲ್ಲಿಕಾರ್ಜುನ್, ರಾಜಶೇಖರ್, ಗಂಗಾಧರ್, ಈರಣ್ಣ ಯಾದವ್,ಮಾರುತಿ,ಕುಮಾರ್, ಕರುನಾಡ ಜಿಯಾ
ಸೇರಿದಂತೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ವೇಳೆ ರವಿ ಬೆಳಗೆರೆ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ, ಪುಷ್ಪಗುಚ್ಛ ಸಲ್ಲಿಸಲಾಯಿತು.

Share This Article
Leave a Comment

Leave a Reply

Your email address will not be published. Required fields are marked *