ಟ್ರಯಲ್ ನಲ್ಲಿ ದ್ವಂದ್ವ ಹೇಳಿಕೆ ನೀಡಿದ ರತ್ನಪ್ರಭಾ : ದರ್ಶನ್ ಗೆ ಅನುಕೂಲವಾಗುತ್ತಾ..?

1 Min Read

ಬೆಂಗಳೂರು: ರೇಣುಕಾಸ್ವಾಮಿ ಕೊಲೆ‌ ಪ್ರಕರಣದಲ್ಲಿ ಟ್ರಯಲ್ ಶುರುವಾಗಿ 14 ದಿನವಾಗಿದೆ. ಇಂದು ಕೂಡ ರೇಣುಕಾಸ್ವಾಮಿ ಅವರ ತಂದೆ – ತಾಯಿಯ ವಿಚಾರಣೆ ನಡೆದಿದೆ. ಅವರ ಹೇಳಿಕೆಗಳನ್ನ ದಾಖಲು ಮಾಡಿಕೊಳ್ಳಲಾಗಿದೆ. ಈ ಸಂಬಂಧ ಇಂದು ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಅವರ ತಾಯಿಯನ್ನ ಕ್ರಾಸ್ ಎಕ್ಸಾಮಿನೇಷನ್ ಮಾಡಲಾಗಿದೆ. ಈ ವೇಳೆ ಕೇಸ್ ನ ಧಿಕ್ಕನ್ನೇ ಬದಲಿಸುವಂತ ಹೇಳಿಕೆಗಳನ್ನ ರತ್ನಪ್ರಭಾ ನೀಡಿದ್ದಾರೆ ಎನ್ನಲಾಗಿದೆ.

ಪ್ರಮುಖವಾಗಿ ಪವಿತ್ರಾ ಗೌಡ ಪರ ವಾದ ಮಾಡುವಂತಹ ವಕೀಲರು ಒಂದಷ್ಟು ಪಾಯಿಂಟ್ಸ್ ಗಳನ್ನ ಇಟ್ಟುಕೊಂಡು ವಾದ ಮಂಡಿಸುತ್ತಾರೆ. ರೇಣುಕಾಸ್ವಾಮಿ ಬಳಕೆ ಮಾಡುತ್ತಿದ್ದಂತ ಮೊಬೈಲ್ ಸಂಖ್ಯೆ ಇದೇನಾ ಎಂದು ತನಿಖಾಧಿಕಾರಿಗಳು ಕೇಳಿದ್ದಾರೆ. ಅಂದು ಪೊಲೀಸರ ಹೇಳಿಕೆಯಲ್ಲಿ ಮಗ ಸ್ನೇಹಿತರ ಜೊತೆಗೆ ಊಟಕ್ಕೆ ಹೋಗ್ತೇನೆ ಎಂದು ಹೇಳಿದ್ದ, ಮೊಬೈಲ್ ನಲ್ಲಿ ನೋಡಿಕೊಂಡು ಕಾಲ್ ಮಾಡ್ತೇನೆ ಎಂದಿದ್ದ ರತ್ನಪ್ರಭಾ ಕ್ರಾಸ್ ಎಕ್ಸಾಮಿನೇಷನ್ ನಲ್ಲಿ ನನಗೆ ಮಗನ ಮೊಬೈಲ್ ನಂಬರ್ ಗೊತ್ತಿಲ್ಲ ಎಂದಿದ್ದಾರೆ.

 

ಸಮಯದ ಬಗ್ಗೆ ಕೇಳಿದಾಗಲೂ ನನಗೆ ನೆನಪಿಲ್ಲ ಎನ್ನುತ್ತಿದ್ದಾರೆ. ಅಂದು ಪೋಸ್ಟ್ ಮಾರ್ಟಮ್ ಸಮಯದಲ್ಲಿ ವೆಪನ್ ಅನ್ನ ಪೊಲೀಸರು ನಮ್ಮ ಕೈಗೆ ಕೊಟ್ಟಿದ್ದರು ಎಂದಿದ್ದರು. ತನಿಖೆಯೇ ಆಗದೆ ವೆಪನ್ ಸಿಗುವುದಕ್ಕೆ ಹೇಗೆ ಸಾಧ್ಯ ಎಂಬೆಲ್ಲಾ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಈ ಎಲ್ಲಾ ಬೆಳವಣಿಗೆಯ ನಡುವೆ ಎಸ್ಪಿಪಿ ಪ್ರಸನ್ನ ಕುಮಾರ್ ಅವರು ಹಾಸ್ಟೆಲ್ ವಿಟ್ನೆಸ್ ಎಂದು ಪರಿಗಣನೆ ಮಾಡಿ ಎಂದಿದ್ದಾರೆ. ಸೋಮವಾರ ಈ ಸಂಬಂಧ ವಿಚಾರಣೆ ನಡೆಯಲಿದೆ. ಹಾಸ್ಟೆಲ್ ವಿಟ್ನೆಸ್ ಅಂದ್ರೆ ಏನು ಅಂದ್ರೆ ತನಿಖಾಧಿಕಾರಿಗಳ ಮುಂದೆ ಒಂದು ಹೇಳಿಕೆ, ಕೋರ್ಟ್ ಮುಂದೆ ಕೊಡುವುದು ಬೇರೆ ಹೇಳಿಕೆ ನೀಡಿದಾಗ ಅದನ್ನ ಹಾಸ್ಟೆಲ್ ವಿಟ್ನೆಸ್ ಎನ್ನುತ್ತಾರೆ‌. ಈ ಸಾಕ್ಷಿಯನ್ನ ಕನ್ಸಿಡರ್ ಮಾಡಬೇಡಿ ಎಂದು ಎಸ್ಪಿಪಿ ಪ್ರಸನ್ನ ಕುಮಾರ್ ಮನವಿ ಮಾಡಿದ್ದಾರೆ.

Share This Article