ಹಿರಿಯೂರು: ತಾಲೂಕಿನ ಐತಿಹಾಸಿಕ ಪುಣ್ಯಕ್ಷೇತ್ರ ಕೂಡ್ಲಹಳ್ಳಿ ಗ್ರಾಮದ ಶ್ರೀಸಂಗಮೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ರಥೋತ್ಸವ ಸೋಮವಾರ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆ ಯಿಂದ ಜರುಗಿತು.
ವೇದಾವತಿ ಹಾಗೂ ಸುವರ್ಣಮುಖಿ ನದಿಯ ಸಂಗಮ ಕ್ಷೇತ್ರವಾಗಿರುವ ಕೂಡ್ಲಹಳ್ಳಿ ಸಂಗಮೇಶ್ವರ ದೇವಾಲಯದಲ್ಲಿ ಪ್ರತಿ ವರ್ಷವು ಶ್ರಾವಣ ಮಾಸದ ಕೊನೆಯ ಸೋಮವಾರ ಜಾತ್ರಾ ಮಹೋತ್ಸವ ವಿಶೇಷವಾಗಿ ನಡೆಯುತ್ತದೆ. ಅದರಂತೆ ಈ ವರ್ಷವು ಸೋಮವಾರ ವಿವಿಧ ಹೂವುಗಳಿಂದ ಅಲಂಕರಿಸಿದ ರಥಕ್ಕೆ ಸಂಗಮೇಶ್ವರ ದೇವರನ್ನು ಕರೆತಂದು ರಥದಲ್ಲಿ ಕೂರಿಸಿ ವಿಶೇಷ ಪೂಜೆ ಸಲ್ಲಿಸಿ, ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಬಳಿಕ ರಥೋತ್ಸವ ಸಂಗಮೇಶ್ವರನ ಪಾದದ ಕಲ್ಲುಗಳ ಬಳಿ ಎಳೆದು ಕರೆತರಲಾಯಿತು. ಅನಂತರ ಗ್ರಾಮದ ಶ್ರೀಪಾರ್ಥಲಿಂಗೇಶ್ವರ ದೇವರ ಗಂಟೆ, ಸಂಗಮೇಶ್ವರ ಕಲ್ಲುಗಳಿಗೆ ಪೂಜೆ ಸಲ್ಲಿಸಲಾಯಿತು. ಹಾಗೂ ಮಹಿಳೆಯರ ಸಂಗಮೇಶ್ವರ ದೇವರಿಗೆ ತಂಬಿಟ್ಟಿನ ಆರತಿ ಬೆಳಗಿ ಭಕ್ತಿ ಸಮರ್ಪಿಸಿದರು. ನಂತರ ರಥೋತ್ಸವ ಸಂಗಮೇಶ್ವರ ಸನ್ನಿಗೆ ಹಿಂತಿರುಗಿತು. ನೆರೆದಿದ್ದ ಸಾವಿರಾರು ಭಕ್ತರು ಸಂಗಮೇಶ್ವರ ರಥೋತ್ಸವಕ್ಕೆ ಬಾಳೆ ಹಣ್ಣು, ಮಂಡಕ್ಕಿಯನ್ನು ಸೂರುಬಿಡುವ ಮೂಲಕ ಭಕ್ತಿಯನ್ನು ನೆರವೇರಿಸುವರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಕೆ. ಅಭಿನಂದನ್, ಚಿದಂಬರಂ ಗೌಡ, ಜಿಟಿ. ಮೋಹನ್ ಕೃಷ್ಣ, ಡಿಸಿ. ಪಾತಲಿಂಗಪ್ಪ, ಡಾ.ಈರಗಾರ್ ಪಾತಲಿಂಗಪ್ಪ, ಕೆ.ತಿಪ್ಪೇಸ್ವಾಮಿ, ದಿನೇಶ್, ಚಿದಾನಂದ ಸ್ವಾಮಿ, ಶ್ರೀನಿವಾಸ್, ಸೇರಿದಂತೆ ಮತ್ತಿತರರು ಇದ್ದರು.