ಸುದ್ದಿಒನ್, ಮುಂಬಯಿ, ಅಕ್ಟೋಬರ್. 09 : ಕೈಗಾರಿಕೋದ್ಯಮಿ ಮತ್ತು ಟಾಟಾ ಸನ್ಸ್ ನ ಗೌರವಾಧ್ಯಕ್ಷ ರತನ್ ಟಾಟಾ ಅವರ ಸ್ಥಿತಿ ಗಂಭೀರವಾಗಿದೆ. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರು ಅವರ ಆರೋಗ್ಯವನ್ನು ನಿರಂತರವಾಗಿ ಗಮನಿಸುತ್ತಿದ್ದಾರೆ. 86 ವರ್ಷದ ರತನ್ ಟಾಟಾ ಅವರ ಆರೋಗ್ಯದ ಬಗ್ಗೆ ಟಾಟಾ ಸಮೂಹ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ರತನ್ ಟಾಟಾ ಬಹಳ ಉದಾರ ವ್ಯಕ್ತಿ. ಅವರು 28 ಡಿಸೆಂಬರ್ 1937 ರಂದು ಜನಿಸಿದರು. ವಿದೇಶದಲ್ಲಿ ಅಧ್ಯಯನವನ್ನು ಮುಗಿಸಿದ ನಂತರ, ರತನ್ ಟಾಟಾ ಮೊದಲು ಟಾಟಾ ಗ್ರೂಪ್ ಕಂಪನಿಯಾದ ಟಾಟಾ ಇಂಡಸ್ಟ್ರೀಸ್‌ನಲ್ಲಿ ಸಹಾಯಕರಾಗಿ ಸೇರಿಕೊಂಡರು. ಆ ನಂತರ ಜಮ್ಶೆಡ್‌ಪುರದ ಟಾಟಾ ಪ್ಲಾಂಟ್‌ನಲ್ಲಿ ಕೆಲವು ತಿಂಗಳು ತರಬೇತಿ ಪಡೆದರು. ತರಬೇತಿ ಮುಗಿಸಿ ರತನ್ ಟಾಟಾ ಅವರು ತಮ್ಮ ಜವಾಬ್ದಾರಿಯನ್ನು ಆರಂಭಿಸಿದರು. ರತನ್ ಟಾಟಾ, ಟಾಟಾ ಗ್ರೂಪ್ ಅನ್ನು ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ಮಾರ್ಚ್ 1991 ರಿಂದ ಡಿಸೆಂಬರ್ 2012 ರವರೆಗೆ ಮುನ್ನಡೆಸಿದರು. 2008 ರಲ್ಲಿ, ರತನ್ ಟಾಟಾ ಅವರಿಗೆ ಭಾರತ ಸರ್ಕಾರವು ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ನೀಡಿ ಗೌರವಿಸಿತು.