ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಅದ್ದೂರಿಯಾಗಿ ನಡೀತಾ ಇದೆ. ರಾಜಸ್ಥಾನದ ಉದಯಪುರದ ವಿಲ್ಲಾದಲ್ಲಿ ಮದುವೆ ತಯಾರಿಗಳು ನಡೀತಾ ಇದ್ದು, ಈಗಾಗಲೇ ಕುಟುಂಬಸ್ಥರು, ಆತ್ಮೀಯರು ಉದಯಪುರಕ್ಕೆ ತಲುಪಿದ್ದಾರೆ. ಶಾಸ್ತ್ರಗಳು ಕೂಡ ನಡೆಯುತ್ತಿವೆ. ಇದರ ಜೊತೆಗೆ ವಿಹಯ್ ದೇವರಕೊಂಡ ಅವರ ಕುಟುಂಬದ ಒಡವೆಗಳು ಕೂಡ ರಶ್ಮಿಕಾ ಅವರ ಕೈಸೇರಿದೆ.
ವಿಜಯ್ ಅವರ ತಾಯಿ ಮಾಧವಿ ದೇವರಕೊಂಡ ಅವರು, ಸಂಪ್ರದಾಯದಂತೆ ರಶ್ಮಿಕಾ ಅವರಿಗೆ ಚರಾಸ್ತಿಯ ಬಳೆಗಳನ್ನ ನೀಡಿದ್ದಾರೆ. ಸಂಗೀತ ಕಾರ್ಯಕ್ರಮದಲ್ಲಿ ರಶ್ಮಿಕಾ ಅವರಿಗೆ ಬಳೆಗಳನ್ನ ನೀಡಿ, ಹಾರೈಸಿದ್ದಾರೆ ಎನ್ನಲಾಗಿದೆ. ನಾಳೆ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಇಬ್ಬರು ಅಧಿಕೃತವಾಗಿ ದಂಪತಿಯಾಗುತ್ತಿದ್ದಾರೆ. ಬಹಳ ವರ್ಷಗಳಿಂದ ಪ್ರೀತಿಯಲ್ಲಿ ಬಿದ್ದಿದ್ದ ಪ್ರೇಮಿಗಳು ತಮ್ಮ ಪ್ರೀತಿಯನ್ನ ಗುಟ್ಟಾಗಿ ಕಾಪಾಡಿಕೊಂಡು ಬಂದಿದ್ದರು. ಮದುವೆಯ ಎಲ್ಲಾ ತಯಾರಿಗಳು ನಡೆದಿದ್ದರು, ಈ ಬಗ್ಗೆ ಸತ್ಯ ಹೇಳಿರಲಿಲ್ಲ. ಆದರೆ ಕಳೆದ ವಾರವಷ್ಟೇ ವಿಜಯ್ ಹಾಗೂ ರಶ್ಮಿಕಾ ಈ ವಿಚಾರವನ್ನ ಹಂಚಿಕೊಂಡಿದ್ದರು.
ರಶ್ಮಿಕಾ ಮಂದಣ್ಣ ತಮ್ಮಮದುವೆಯ ಆರತಕ್ಷತೆಗೆ ಕನ್ನಡದ ಸ್ಟಾರ್ ನಟರನ್ನು ಆಹ್ವಾನಿಸಿರುವುದು ವಿಶೇಷವಾಗಿದೆ. ಶಿವಣ್ಣ, ಸುದೀಪ್, ಯಶ್, ಸಿಂಪಲ್ ಸುನಿ, ನಂದಕಿಶೋರ್, ಎ ಹರ್ಷ ಅವರನ್ನು ಮದುವೆಗೆ ಆಹ್ವಾನ ಮಾಡಿದ್ದಾರೆ. ಇನ್ನು ನಟಿಯನ್ನು ಆಹ್ವಾನ ಮಾಡಿದ್ದು, ಆಶಿಕಾ ರಂಗನಾಥ್ ಮದುವೆಗೆ ಹಾಜರಾಗಿದ್ದಾರೆ. ಫ್ಯಾಮಿಲಿ, ಫ್ರೆಂಡ್ಸ್ ಸೇರಿ 100 ಜನರಿಗೆ ಮಾತ್ರ ಮದುವೆಯಲ್ಲಿ ಆಹ್ವಾನ ನೀಡಿದ್ದಾರೆ. ಮಾರ್ಚ್ 4ರಂದು ಅದ್ದೂರಿಯಾಗಿ ನಡೆಯುವ ಆರತಕ್ಷತೆಗೆ ಟಾಲಿವುಡ್, ಬಾಲಿವುಡ್ ಸ್ನೇಹಿತರನ್ನು ಆಹ್ವಾನಿಸಿದ್ದಾರೆ. ಸದ್ಯ ರಶ್ಮಿಕಾ ಹಾಗೂ ವಿಜಯ್ ಮದುವೆ ಟ್ರೆಂಡಿಂಗ್ ನಲ್ಲಿದೆ.



