ತುಮಕೂರು: ಕಾನೂನು ರಕ್ಷಣೆ ಮಾಡಬೇಕಾದವರೇ ಭಕ್ಷಕರಾಗಿಬಿಟ್ಟರೆ ನ್ಯಾಯ ಕೇಳಲು ಯಾರ ಬಳಿ ಹೋಗಬೇಕು ಎಂಬ ಭಯ ಕಾಡದೆ ಇರದು. ಅಂತದ್ದೊಂದು ಘಟನೆ ತುಮಕೂರಿನಲ್ಲಿ ಸುದ್ದಿಯಾಗಿತ್ತು. ಇದೀಗ ಆ ಎಎಸ್ಐಗೆ ಕೋರ್ಟ್ ಶಿಕ್ಷೆ ವಿಧಿಸಿದೆ.
ಎಎಸ್ಐ ಉಮೇಶಯ್ಯ ಅಪರಾಧಿ ಎಂದು ಇದೀಗ ತುಮಕೂರು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ. ಸೋಮವಾರ ಈತನಿಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವುದಾಗಿ ಕೋರ್ಟ್ ಹೇಳಿದೆ.
ತುಮಕೂರು ಗ್ರಾಮಾಂತರ ಎಎಸ್ಐ ಆಗಿದ್ದ ಉಮೇಶಯ್ಯ, 2017ರ ಜ 15 ರಂದು ಅಂತರಸನಹಳ್ಳಿಯ ಸೇತುವೆ ಮೇಲೆ ಹೋಗುತ್ತಿದ್ದ ಸಂತ್ರಸ್ತೆಯನ್ನ ಡ್ರಾಪ್ ಕೊಡುವ ನೆಪದಲ್ಲಿ ತಮ್ಮ ಬೊಲೇರೋ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾನೆ.
ಆ ಬಳಿಕ ಅತ್ಯಾಚಾರ ಎಸಗಿದ್ದ. ಈ ಸಂಬಂಧ ಸಂತ್ರಸ್ತೆಯ ಸಂಬಂಧಿಕರು ದೂರು ದಾಖಲಿಸಿದ್ದರು. ಆ ಸಂದರ್ಭದಲ್ಲಿ ಈ ವಿಚಾರ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿತ್ತು. ಎಎಸ್ಐ ಅತ್ಯಾಚಾರ ಪ್ರಕರಣದ ಕುರಿತು ಸರ್ಕಾರಿ ಅಭಿಯೋಜಕಿ ವಿ.ಎ.ಕವಿತಾ ವಾದ ಮಂಡಿಸಿದ್ದರು. ಜಡ್ಜ್ ಹೆಚ್.ಎಸ್.ಮಲ್ಲಿಕಾರ್ಜುನಸ್ವಾಮಿ ವಾದ ಪ್ರತಿವಾದ ಆಲಿಸಿದ್ದು, ಇಂದು ತೀರ್ಪು ಪ್ರಕಟಿಸಿದ್ದಾರೆ. ಇನ್ನು ಎರಡನೇ ಆರೋಪಿಯಾಗಿದ್ದ ಖಾಸಗಿ ವಾಹನ ಚಾಲಕ ಈಶ್ವರನನ್ನು ಆರೋಪ ಮುಕ್ತಗೊಳಿಸಿದ ಕೋರ್ಟ್ ಆದೇಶ ನೀಡಿದೆ