ಬೆಂಗಳೂರು; ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ಜೈಲು ವಾಸ ಅನಿಭವಿಸುತ್ತಿದ್ದಾರೆ. ಇದರ ನಡುವೆ ತನಿಖೆಯು ನಡೆಯುತ್ತಿದ್ದು, ಗೌರವ ಗುಪ್ತ ನೇತೃತ್ವದಲ್ಲಿ ನಡೆದ ತನಿಖೆಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. 230 ಪುಟಗಳ ವರದಿ ಇದಾಗಿದೆ.

ಈ ತನಿಖೆಯಲ್ಲಿ ನಟಿ ರನ್ಯಾ ರಾವ್ ಅವರಿಗೆ ಸಿಗುತ್ತಿದ್ದ ಪ್ರೋಟೋಕಾಲ್ ಬಗ್ಗೆಯೂ ಮಾಹಿತಿಯನ್ನು ಕಲೆ ಹಾಕಿದ್ದಾರೆ. ದುಬೈಗೆ ಹೋಗಿ ಬರುತ್ತಿದ್ದ ರನ್ಯಾ ರಾವ್ ಅವರು ಏರ್ಪೋರ್ಟ್ ನಲ್ಲಿ ಪ್ರೋಟೋಕಾಲ್ ಬಳಕೆ ಮಾಡಿಕೊಳ್ಳುತ್ತಿದ್ದರು. ಈ ವಿಚಾರ ರನ್ಯಾ ಅವರ ಮಲತಂದೆ ಡಿಜಿಪಿ ರಾಮಚಂದ್ರ ಅವರಿಗೂ ಗೊತ್ತಿತ್ತು. ಆದರೆ ಮಗಳಿಗೆ ಪ್ರೋಟೋಕಾಲ್ ನೀಡಿ ಎಂದು ರಾಮಚಂದ್ರ ರಾವ್ ಹೇಳಿರಲಿಲ್ಲ. ಅವರೆ ನೀಡಿ ಎಂದು ಹೇಳಿರುವುದಕ್ಕೆ ಯಾವ ಸಾಕ್ಷಿಯೂ ಸಿಕ್ಕಿಲ್ಲ. ಇದರ ನಡುವೆ ರನ್ಯಾ ರಾವ್ ಪ್ರೋಟೋಕಾಲ್ ಅನ್ನು ಯಾವ ರೀತಿ ಬಳಕೆ ಮಾಡಿಕೊಳ್ಳುತ್ತಾ ಇದ್ದರು ಎಂಬುದಕ್ಕೆ ತನಿಖಾ ಅಧಿಕಾರಿಗಳು ಮಹತ್ವದ ಮಾಹಿತಿಯನ್ನು ಕಲೆ ಹಾಕಿದ್ದಾರೆ.

ರನ್ಯಾ ರಾವ್ ಅವರು ಹಲವು ಬಾರಿ ಸರ್ಕಾರಿ ಕಾರು, ಸರ್ಕಾರಿ ಫೋನ್ ಬಳಕೆ ಮಾಡಿರುವ ಮಾಹಿತಿಯು ಲಭ್ಯವಾಗಿದೆ. ಇದೆಲ್ಲವೂ ವಿಮಾನ ನಿಲ್ದಾಣದಲ್ಲಿರುವ ಸಿಸಿಟಿವಿಯಲ್ಲಿಯೇ ಸ್ಪಷ್ಟವಾಗಿ ಗೊತ್ತಾಗಿದೆ ಎಂಬುದನ್ನು ತನಿಖಾ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತ ಇನ್ನಷ್ಟು ಸಾಕ್ಷಿಗಳು ಸಿಕ್ಕ ಮೇಲೆ ತನಿಖೆ ಇನ್ನಷ್ಟು ಸ್ಟ್ರಾಂಗ್ ಆಗಲಿದೆ. ಸಧ್ಯ ಗೌರವ ಗುಪ್ತ ತಂಡ ನಡೆಸಿರುವ ತನಿಖೆಯ ವರದಿಯಷ್ಟೇ ಸಲ್ಲಿಕೆಯಾಗಿದೆ. ಇದರಿಂದ ರಾಮಚಂದ್ರ ರಾವ್ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗುವುದು ಖಚಿತವಾಗಿದೆ. ರನ್ಯಾ ರಾವ್ ಪ್ರೋಟೋಕಾಲ್ ಬಳಕೆ ಮಾಡಿಕೊಂಡೆ ಗೋಲ್ಡ್ ಸ್ಮಗ್ಲಿಂಗ್ ಗೆ ಇಳಿದಿದ್ದರು.

