ತುಳುನಾಡಿನ ದೈವದ ಬಗ್ಗೆ ವ್ಯಂಗ್ಯ : ಕ್ಷಮೆ ಕೇಳಿದ ರಣವೀರ್ ಸಿಂಗ್

1 Min Read

ಗೋವಾ ಸಿನಿಮೋತ್ಸವದಲ್ಲಿ ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಕಾಂತಾರ ಸಿನಿಮಾ ಬಗ್ಗೆ ಮಾತನಾಡಿದ್ದರು. ಕಾಂತಾರ ಸಿನಿಮಾದ ದೈವದ ಬಗ್ಗೆ ಮಾತನಾಡಿದ್ದರು. ವ್ಯಂಗ್ಯ ಮಾಡಿದ್ದರು. ದೈವವನ್ನ ದೆವ್ವಕ್ಕೆ ಹೋಲಿಕೆ ಮಾಡಿದ್ದರು. ರಿಷಬ್ ಅವರ ನಟನೆಯನ್ನು ವ್ಯಂಗ್ಯ ಮಾಡಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲೆಲ್ಲಾ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ರಣವೀರ್ ಸಿಂಗ್ ಆ ವಿಚಾರಕ್ಕೆ ಕ್ಷಮೆ ಕೇಳಿದ್ದಾರೆ.

ತಾನೂ ಯಾರ ಭಾವನೆಗಳಿಗಾದರೂ ಧಕ್ಕೆ ತಂದಿದ್ದರೆ ಕ್ಷನೆ ಕೇಳುತ್ತೇನೆ ಎಂದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನ ಹಾಕಿದ್ದಾರೆ. ರಿಷಬ್ ಶೆಟ್ಟಿ ಅವರ ಅಭಿನಯವನ್ನು ಎತ್ತಿ ತೋರಿಸುವುದು ನನ್ನ ಉದ್ದೇಶವಾಗಿತ್ತು. ಅಲ್ಲದೆ ದೇಶದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ನಾನು ಗೌರವಿಸುತ್ತೇನೆ. ಒಂದು ವೇಳೆ ನನ್ನ ಮಾತುಗಳಿಂದ ಧಕ್ಕೆಯಾಗಿದ್ದರೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ನಟನಿಂದ ನಟನಿಗೆ, ಟಾ ನಿರ್ದಿಷ್ಟ ದೃಶ್ಯವನ್ನು ಅವರು ಮಾಡಿದ ರೀತಿಯಲ್ಲಿ ನಿರ್ವಹಿಸಲು ಎಷ್ಟು ಶ್ರಮ ತೆಗೆದುಕೊಳ್ಳುತ್ತದೆ ಎಂದು ನನಗೆ ತಿಳಿದಿದೆ. ಅದಕ್ಕಾಗಿ ಅವರ ಬಗ್ಗೆ ನನಗೆ ಅತೀವ ಮೆಚ್ಚುಗೆಯಿದೆ ಎಂದು ಹೇಳಿದ್ದಾರೆ.

 

ನಮ್ಮ ದೇಶದ ಪ್ರತಿಯೊಂದು ಸಂಸ್ಕೃತಿ, ಸಂಪ್ರದಾಯ ಮತ್ತು ನಂಬಿಕೆಯನ್ನು ನಾನು ಯಾವಾಗಲೂ ಆಳವಾಗಿ ಗೌರವಿಸುತ್ತೇನೆ. ನಾನು ಯಾರ ಭಾವನೆಗಳಿಗೆ ನೋವುಂಟು ಮಾಡಿದ್ದರೆ, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ. ಡಿಸೆಂಬರ್ 5 ಕ್ಕೆ ರಣವೀರ್ ಸಿಂಗ್ ಅವರ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಸೆನ್ಸಾರ್ ನಲ್ಲಿ ಸಮಸ್ಯೆಯಾಗಿರುವ ಕಾರಣ ಅವರ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ. ಈ ಬೆನ್ನಲ್ಲೇ ದೈವದ ಬಗ್ಗೆ ಆಡಿದ ಮಾತುಗಳಿಗೆ ಕ್ಷಮೆಯಾಚಿಸಿದ್ದಾರೆ.

Share This Article