ಚಿತ್ರದುರ್ಗ, (ಮಾ.27) : ಕಲಾ ಪ್ರಕಾರಗಳಲ್ಲಿ ಶಕ್ತಿಯುತ ಮಾಧ್ಯಮ “ರಂಗಭೂಮಿ”ರಂಗಭೂಮಿಗೆ ಸಾವಿಲ್ಲ. ರಂಗಭೂಮಿ ಮತ್ತೆ ಮತ್ತೆ ಮರು ಹುಟ್ಟು ಪಡೆಯುತ್ತದೆ ಹಾಗೂ ಬೇರೆ ಬೇರೆ ಆಯಾಮ, ರೂಪಾಂತರ ಪಡೆದುಕೊಳ್ಳುತ್ತದೆ. ರಂಗಭೂಮಿ ಎಲ್ಲ ಕಲಾಪ್ರಕಾರಗಳಲ್ಲಿ ತುಂಬಾ ಶಕ್ತಿಯುತವಾದ ಮಾಧ್ಯಮ ಎಂದು ರಂಗವಿಮರ್ಶಕ ಡಾ.ವಿ.ಬಸವರಾಜ ಅಭಿಪ್ರಾಯಪಟ್ಟರು.
ನಗರದ ಐಯುಡಿಪಿ ಬಡಾವಣೆಯ ಲಿಲ್ ಬ್ರೂಕ್ಸ್ ಶಾಲಾ ಆವರಣದಲ್ಲಿ ಸೋಮವಾರ ಬಾದರದಿನ್ನಿ ಆಟ್ರ್ಸ್ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾಟಕಕ್ಕೆ ಖಂಡಿತವಾಗಿಯೂ ಒಂದು ಶಕ್ತಿ ಇದೆ. ಬದುಕು ಅರಳಿಸುವ, ಬದುಕಿಗೆ ಹೊಸ ಆಯಾಮ ಕೊಡುವ ಕೆಲಸ ರಂಗಭೂಮಿಯಲ್ಲಿ ತೊಡಗಿಸಿಕೊಂಡವರಿಗೆ ಆಗಲಿದೆ. ರಂಗಭೂಮಿ ಭೂತಕಾಲ, ವರ್ತಮಾನ, ಭವಿಷತ್ ಕಾಲ ಸೇರಿದಂತೆ ಮೂರು ಕಾಲಗಳನ್ನೂ ಒಟ್ಟುಗೂಡಿಸುವ ಕೆಲಸ ಮಾಡುತ್ತದೆ. ರಂಗಭೂಮಿ ಬದುಕಿನಲ್ಲಿ ಆನಂದದಾಯಕ ಜೀವನ ಪಡೆದುಕೊಳ್ಳಲು ಸಹಾಯಕವಾಗಿದೆ ಎಂದರು.
ರಂಗಭೂಮಿ ದಿನಾಚರಣೆಯನ್ನು ರಂಗಾಸಕ್ತರು, ಕಲಾವಿದರು, ರಂಗಭೂಮಿಯಲ್ಲಿ ತೊಡಗಿಸಿಕೊಂಡವರು, ರಂಗ ಸಂಘಟಕರು, ರಂಗ ಸಾಹಿತಿಗಳು, ರಂಗನಿರ್ದೇಶಕರು ವರ್ಷಕ್ಕೊಮ್ಮೆ ಒಂದು ಕಡೆ ಸೇರಿಕೊಂಡು ರಂಗಭೂಮಿಯ ಅಳಿವು-ಉಳಿವು, ಮುಂದಿನ ಬದಲಾವಣೆ, ಆಯಾಮಗಳ ಬಗ್ಗೆ ಚರ್ಚಿಸಲು ಒಂದು ಸದಾವಕಾಶ ಎಂಬ ಉದ್ದೇಶದಿಂದ ಪ್ರತಿ ವರ್ಷವೂ ವಿಶ್ವ ರಂಗಭೂಮಿ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
ರಂಗ ಸನ್ಮಾನ ಸ್ವೀಕರಿಸಿ ಮಾತನಾಡಿದ ವೃತ್ತಿರಂಗಭೂಮಿ ಕಲಾವಿದೆ ಶಾಂತಕುಮಾರಿ ಸಿದ್ದೇಶ್ವರಿ, ವೃತ್ತಿರಂಗಭೂಮಿ ಕಲಾವಿದರನ್ನು ಗುರುತಿಸುವ ಕೆಲಸವಾಗಬೇಕು. ನಾವು ನೂರಾರು ನಾಟಗಳಲ್ಲಿ ಅಭಿನಯಿಸಿದರೂ ನಮ್ಮನು ಯಾರು ಸರಿಯಾಗಿ ಗುರುತಿಸುತ್ತಿಲ್ಲ. ನಮ್ಮ ಕಲೆಗೆ ಸರಿಯಾದ ಮಣ್ಣನೆ ಸಿಗುತ್ತಿಲ್ಲ. ಆದಷ್ಟ ನಾನಾ ಸಂಘ ಸಂಸ್ಥೆಗಳು ನಮನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.
ಶಿಕ್ಷಣದಲ್ಲಿ ರಂಗಕಲೆ ಕುರಿತು ಉಪನ್ಯಾಸ ನೀಡಿ ಮಾತನಾಡಿದ ಉಪನ್ಯಾಸಕ ಡಾ. ಮೋಹನ್ ಕುಮಾರ್.ಕೆ ಮಾತನಾಡಿ, ರಂಗಭೂಮಿ ಮಕ್ಕಳಿಗೆ ಸುಲಭವಾಗಿ ತಲುಪುವ ಮಾಧ್ಯಮ. ಮಕ್ಕಳಿಗೆ ಕಲ್ಪನಾಶಕ್ತಿ, ವಿವೇಚನಾಶಕ್ತಿ, ತಾರ್ಕಿಕತೆ, ಗ್ರಹಿಕೆ, ಅನುಕರಣೆ ಮೂಲಕ ಕಲಿಕೆಯ ಗುಣಮಟ್ಟ ಹೆಚ್ಚಿಸುತ್ತದೆ. ರಂಗಭೂಮಿ ಮೂಲತಃ ಸಮಷ್ಠಿಯ ಕಲೆ. ಇದರಲ್ಲಿ ಸಾಹಿತ್ಯ, ಸಂಗೀತ, ನೃತ್ಯ, ಚಿತ್ರಕಲೆ ಮೊದಲಾದ ಲಲಿತಕಲೆಗಳನ್ನು ಪಳಗೊಂಡಿರುವ ರಂಗಭೂಮಿ ಮಕ್ಕಳನ್ನು ಸುಲಭವಾಗಿ ತಲಉಪುತ್ತದೆ. ರಂಗಪಠ್ಯ ಚಟುವಟಿಕೆಗಳು ಮಗುವಿನ ಸೃಜನಶೀಲ ಸಂವೇದನೇಗಳನ್ನು ಜಾಗೃತಗೊಳಿಸುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಚೆನ್ನಬಸಪ್ಪ ರಂಗಗೀತೆಗಳನ್ನು ಪ್ರಸ್ತುತ ಪಡಿಸಿದರು. ಬಾದರದಿನ್ನಿ ಆಟ್ರ್ಸ್ ಅಕಾಡೆಮಿಯ ನಿರ್ದೇಶಕಿ ಜ್ಯೋತಿ ಬಾದರದಿನ್ನಿ ರಂಗ ಸಂದೇಶವನ್ನು ವಾಚಿಸಿದರು.
ಬಾದರದಿನ್ನಿ ಆಟ್ರ್ಸ್ ಅಕಾಡೆಮಿಯ ಕಾರ್ಯದರ್ಶಿ ಪ್ರಕಾಶ್ ಬಾದರದಿನ್ನಿ. ಅಧ್ಯಕ್ಷೆ ಅನೂಸುಯಾ ಬಾದರದಿನ್ನಿ, ನಿನಾಸಂ ಕಲಾವಿದ ಕೆ.ಪಿ.ಎಂ.ಗಣೇಶಯ್ಯ, ರಂಗಕರ್ಮಿಗಳಾದ ಶ್ರೀನಿವಾಸ ಮಳಲಿ, ಶ್ರೀ ಕುಮಾರ, ಗೀರಿಶ್ ಎಸ್.ಸಿ(ರಾಗಿ), ಗುರುಕಿರಣ, ಕುಶಾಲಾ ಭರತನಾಟ್ಯ ಕಲಾವಿದ ಕಿರಣ ಮತ್ತಿತರರು ಇದ್ದರು.