ವರದಿ ಮತ್ತು ಫೋಟೋ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ : ಮನುಷ್ಯ ತನ್ನನ್ನು ತಾನು ಅರಿಯಲು ರಂಗಭೂಮಿ ರಂಗ ಚಟುವಟಿಕೆಗಳು ಅತ್ಯಂತ ಸಹಕಾರಿಯಾದುದು ಎಂದು ಚಿತ್ರದುರ್ಗ ವಿಜ್ಞಾನ ಕೇಂದ್ರದ ಅಧ್ಯಕ್ಷರಾದ ಜೆ.ಯಾದವರೆಡ್ಡಿ ತಿಳಿಸಿದರು.
ಬಹುಮುಖಿ ಕಲಾ ಕೇಂದ್ರ ಚಿತ್ರದುರ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರುಗಳ ಸಹಯೋಗದೊಂದಿಗೆ ತ.ರಾ.ಸು.ರಂಗಮಂದಿರಲ್ಲಿ ನಡೆದ ರಂಗಗೀತೆಗಳ ಗಾಯನ ಸಮೂಹ ನೃತ್ಯ ಮತ್ತು ರಂಗಪ್ರಯೋಗದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಾಟಕ ಒಂದು ಸಮುದಾಯದ ಆತ್ಮಚರಿತ್ರೆಯಿದ್ದಂತೆ. ನಾಟಕ ಮಾಧ್ಯಮ ಜಗತ್ತಿನ ಅತ್ಯಂತ ಪ್ರಾಚೀನ ಕಲೆಯಾಗಿದ್ದು, ಸಮಾಜದ ಕೈಗನ್ನಡಿ. ರಂಗಭೂಮಿ ಜಗತ್ತಿನ ವಿಶ್ವವಿದ್ಯಾಲಯವಿದ್ದಂತೆ. ಜ್ಞಾನ, ಸಂಸ್ಕೃತಿ, ಪ್ರಸಾರಗಳಿಗೆ ಉತ್ತಮ ಮಾಧ್ಯಮವಾಗಿದ್ದು, ಮಕ್ಕಳು ರಂಗ ಕಲೆಯಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದ ರಂಗ ಸಂಘಟಕ ಆರ್.ಶೇಷಣ್ಣಕುಮಾರ್ ರಂಗಭೂಮಿ ಹಾಗೂ ಕಲಾವಿದರು ಉಳಿಯಬೇಕಾಗಿರುವುದರಿಂದ ಸರ್ಕಾರದೊಂದಿಗೆ ಪ್ರೇಕ್ಷಕರ ಪ್ರೋತ್ಸಾಹ ಬೇಕು. ಯುವ ಪೀಳಿಗೆ ರಂಗ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಮೂಲಕ ರಂಗಭೂಮಿಗೆ ಉತ್ತೇಜನ ನೀಡಬೇಕೆಂದು ಮನವಿ ಮಾಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬಯಲಾಟ ರಂಗಕಲಾವಿದ ಹನುಮಂತಪ್ಪ ನನ್ನಿವಾಳ ಮಾತನಾಡುತ್ತ ನಾಟಕವೂ ನೋಡುವ ಪ್ರತಿ ಪ್ರೇಕ್ಷಕರಲ್ಲಿ ಹೃದಯಕ್ಕೂ ಹಾಗೂ ಮನಸ್ಸಿಗೂ ಚಿಂತನೆಯನ್ನು ಹಚ್ಚುತ್ತದೆ. ಪ್ರೇಕ್ಷಕರ ಮನಸ್ಸಿಗೆ ನಾಟುವಂತೆ ಮೂಲ ಕಥಾವಸ್ತುವನ್ನು ತಲುಪಿಸುವ ಜವಾಬ್ದಾರಿ ನಿರ್ದೇಶಕ ಹಾಗೂ ನಟರ ಮೇಲಿದೆ ಎಂದರು.
ರಂಗ ಕಲಾವಿದ ಎಂ.ಸಿ.ಮಂಜುನಾಥ್ ಮಾತನಾಡಿ ರಂಗಭೂಮಿ ಪ್ರೇಕ್ಷಕನಿಂದ ದೂರವಾಗುತ್ತಿರುವ ಇಂದಿನ ಸಂದರ್ಭದಲ್ಲಿ ರಂಗ ಪ್ರದರ್ಶನಗಳು ಹೆಚ್ಚಾಗಿ ನಡೆಯಬೇಕಾಗಿರುವ ಅನಿವಾರ್ಯತೆ ಇಂದಿನ ದಿನಮಾನಗಳಲ್ಲಿದೆ ಎಂದು ಹೇಳಿದರು.
ಚನ್ನಬಸಪ್ಪ ಮತ್ತು ಸಂಗಡಿಗರಿಂದ ರಂಗ ಗೀತೆಗಳ ಗಾಯನ. ಶ್ರೇಯಾ ಮತ್ತು ಸಂಗಡಿಗರಿಂದ ಸಮೂಹ ನೃತ್ಯ ಹಾಗೂ ಕೊಪ್ಪಳದ ವಿಸ್ತಾರ್ ರಂಗಶಾಲೆ ಇವರಿಂದ ಧೀಮಂತರಾಮ್ ನಿರ್ದೇಶನದ ಜಂಗಮದೆಡೆಗೆ ನಾಟನ ಪ್ರದರ್ಶನಗೊಂಡಿತು.
ರಂಗಕಲಾವಿದರಾದ ಶ್ರೀನಿವಾಸಮೂರ್ತಿ ಟಿ.ಮದಕರಿಪುರ, ಇನ್‍ಫೆಂಟ್ ವಿನಯ್, ಬಹುಮುಖಿ ಕಲಾಕೇಂದ್ರ ಕಾರ್ಯದರ್ಶಿ ಟಿ.ಮಧು, ಯಲ್ಲಪ್ಪ ಎನ್.ಐಹೊಳೆ ಉಪಸ್ಥಿತರಿದ್ದರು.