ನವದೆಹಲಿ: ನಾಳೆ ರಾಜ್ಯಸಭಾ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಹಗ್ಗಜಗ್ಗಾಟ ಇನ್ನು ಸಾಗುತ್ತಲೆ ಇದೆ. ಸಮಯ ಮುಗಿದಿದೆ, ನಾಳೆ ಬೆಳಗ್ಗೆ ಹತ್ತು ಗಂಟೆಗೆ ಚುನಾವಣೆ ಶುರುವಾಗಲಿದೆ. ಕೊನೆ ಗಳಿಗೆಯಲ್ಲಿ ಏನಾದರೂ ಬದಲಾವಣೆಯಾಗಬಹುದಾ..? ಕಾಂಗ್ರೆಸ್ ಮಣಿಯುತ್ತಾ, ಜೆಡಿಎಸ್ ಬೆಂಬಲ ಸೂಚಿಸುತ್ತಾ ಎಂಬ ಕುತೂಹಲಕ್ಕೆ ಬ್ರೇಕ್ ಬೀಳಬಹುದಾ ಎಂದು ಕಾಯುತ್ತಿದ್ದಾರೆ.
ಈ ಮಧ್ಯೆ ಚುನಾವಣಾ ಹಿನ್ನೆಲೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸಚಿವ ರಂದೀಪ್ ಸುರ್ಜೇವಾಲ ಸುದ್ದಿಗೋಷ್ಟಿ ನಡೆಸಿ, ವಿವಾದ ಸರತಷ್ಟಿ ಮಾಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಸರ್ಕಾರಕ್ಕೆ ತಿರುಗೇಟು ನೀಡುವುದಕ್ಕೆ ಹೋಗಿ ಬೇರೆನೊ ಹೇಳಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕಪಿಮುಷ್ಠಿಯಲ್ಲಿ ಅಧಿಕಾರಿಗಳು ಇದ್ದಾರೆ. ಬಿಜೆಪಿ ಹಣ ಮತ್ತು ಅಧಿಕಾರಿಗಳನ್ನು ಬಳಸಿ ಗೆಲ್ಲಲು ಯತ್ನಿಸುತ್ತಿದೆ.
Big row over Surjewala 'Cheerharan' blooper. @milan_reports joins in with more details. #ITVideo #RandeepSurjewala pic.twitter.com/onp0FQI8eQ
— IndiaToday (@IndiaToday) June 9, 2022
ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾದಿಸಲದ್ದಾರೆ. ಸಿಬಿಐ, ಚುನಾವಣಾ ಆಯೋಗ, ಪೊಲೀಸ್ ಇಲಾಖೆ ಎಲ್ಲವೂ ಬಿಜೆಪಿ ಆಮಿಷಕ್ಕೆ ಬಲಿಯಾಗಿದ್ದಾರೆ. ಅಂದು ಸೀತಾಮಾತೆ ವಸ್ತ್ರಾಪರಣ ಮಾಡಿದಂತೆ ಈಗ ಪ್ರಜಾಪ್ರಭುತ್ವದ ಅಪಹರಣ ಮಾಡುತ್ತಿದ್ದಾರೆ ಎಂದಿದ್ದಾರೆ. ಈ ಹೇಳಿಕೆ ಇದೀಗ ವಿವಾದ ಸೃಷ್ಟಿಸಿದೆ.