ಮೈಸೂರು: ಮೈಸೂರು ವಿವಿಯಲ್ಲಿ ಮೇ2 ರಂದು ನಿಗದಿಯಾಗಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಮೂನ್ ಕಮಿಟಿ ರಂಜಾನ್ ಹಬ್ಬವನ್ನು ಸೋಮವಾರವೇ ಮಾಡಲು ತೀರ್ಮಾನಿಸಿರುವ ಕಾರಣ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಮಂಗಳವಾರ ರಂಜಾನ್ ಹಬ್ಬವಿತ್ತು. ಆದರೆ ಮೂನ್ ಕಮಿಟಿಯ ನಿರ್ಧಾರದಿಂದ ಸರ್ಕಾರವೂ ಒಂದು ದಿನ ಮೊದಲೇ ಹಬ್ಬದ ರಜೆ ಘೋಷಿಸಲಾಗಿದೆ. ಮೇ 2 ರಂದು ನಡೆಯಬೇಕಿದ್ದ ಎಲ್ಲಾ ಪರೀಕ್ಷೆಗಳನ್ನು ಮೇ7ಕ್ಕೆ ಮುಂದೂಡಿ ಆದೇಶ ಹೊರಡಿಸಲಾಗಿದೆ. ಮೈಸೂರು ವಿವಿ ಪರೀಕ್ಷಾಲಯದ ಕುಲಸಚಿವರು ತಿಳಿಸಿದ್ದಾರೆ. ಕಾನೂನು ಪದವಿ ಸೇರಿದಂತೆ ಹಲವು ಪದವಿಗಳ ಪರೀಕ್ಷೆಯನ್ನು ನಡೆಸಬೇಕಾಗಿತ್ತು.
ಇನ್ನು ಮೃಗಾಲಯದಲ್ಲಿ ಇದ್ದ ರಜೆಯನ್ನು ಕ್ಯಾನ್ಸಲ್ ಮಾಡಲಾಗಿದೆ. ಕಾರಣ ಭಾನುವಾರ, ಸೊಇಮವಾರ ರಂಜಾನ್, ಮಂಗಳವಾರ ಬಸವ ಜಯಂತಿ ಹೀಗೆ ಸಾಲು ಸಾಲು ರಜೆಗಳು ಬಂದಿರುವ ಕಾರಣ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಮೃಗಾಲಯದ ಸಿಬ್ಬಂದಿಗಳಿಗೆ ರಜೆ ಕ್ಯಾನ್ಸಲ್ ಮಾಡಲಾಗಿದೆ. ಪ್ರವಾಸಿಗರಿಗಾಗಿಯೇ ಮೃಗಾಲಯದ ಕಾರಂಜಿ ತೆರೆದಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.