ಸ್ಯಾಂಡಲ್ ವುಡ್ ಕರವೀನ್, ಮೋಹಕತಾರೆ ರಮ್ಯಾ, ಅಂತು ಇಂತು ಅಭಿಮಾನಿಗಳ ಆಸೆಯನ್ನು ಈಡೇರಿಸುತ್ತಿದ್ದಾರೆ. ಆ್ಯಪಲ್ ಬಾಕ್ಸ್ ಸಂಸ್ಥೆ ಸ್ಥಾಪಿಸಿ, ನಿರ್ಮಾಣಕ್ಕೆ ಎಂಟ್ರಿಕೊಟ್ಟ ರಮ್ಯಾ ಇದೀಗ ನಟನೆಗೂ ಸೈ ಎಂದಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆಯಲ್ಲಿ ತಯಾರಾಗುತ್ತಿರುವ ಸ್ವಾತಿ ಮುತ್ತಿನ ಮಳೆ ಹನಿಯೇ ಮೂಲಕ ನಟಿಯಾಗುತ್ತಾರೆ ಎನ್ನಲಾಗಿತ್ತು. ಆದರೆ ಅದರಿಂದ ಎಕ್ಸಿಟ್ ಆದ ಮೇಲೆ ‘ಉತ್ತರಕಾಂಡ’ದ ಮೂಲಕ ಬರುತ್ತಿದ್ದಾರೆ.
ಡಾಲಿ ಧನಂಜಯ್ ಜೊತೆಗೆ ಹಲವು ವರ್ಷಗಳ ಬಳಿಕ ನಟಿ ರಮ್ಯಾ ಸಿನಿಮಾಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಉತ್ತರಕಾಂಡ ಸಿನಿಮಾದ ಮುಹೂರ್ತ ಇತ್ತಿಚೆಗಷ್ಟೇ ನೆರವೇರಿದೆ. ಈ ಮುಹೂರ್ತ ಕಾರ್ಯಕ್ರಮದಲ್ಲಿ ನಟಿ ರಮ್ಯಾ ಎಲ್ಲರ ಅಟ್ರಾಕ್ಷನ್ ಆಗಿದ್ದರು. ಜರ್ರಿ ಸೀರೆಯನ್ನುಂಟು ಬಂದಿದ್ದರು. ರಮ್ಯಾ ಸೌಂದರ್ಯಕ್ಕೆ ನೋಡುಗರು ಅಂದು ಮಾರು ಹೋಗದೆ ಇರಲಾರರು.
ಅಷ್ಟೇ ಅಲ್ಲ ರಮ್ಯಾ ಅಂದು ಧರಿಸಿದ್ದ ಸೀರೆ ಹಾಗೂ ನೆಕ್ಲೇಸ್ ಕೂಡ ಎಲ್ಲರ ಗಮನ ಸೆಳೆದಿತ್ತು. ಗೋಲ್ಡ್ ಮಿಕ್ಸ್ ಇರುವ ಈ ನೆಕ್ಸೆಲ್ ಬೆಲೆ ಅತ್ಯಂತ ದುಬಾರಿಯೇ ಆಗಿದೆ. ಅಂದಾಜು 20 ಲಕ್ಷ ಮೌಲ್ಯವನ್ನು ನೆಕ್ಲೇಸ್ ಹೊಂದಿತ್ತು ಎನ್ನಲಾಗುತ್ತಿದೆ. ಉತ್ತರಕಾಂಡ ಸಿನಿಮಾ ಮುಹೂರ್ತಕ್ಕೆ ನಟಿ ರಮ್ಯಾ ಇಷ್ಟು ದೊಡ್ಡ ಮೊತ್ತದ ನೆಕ್ಲೇಸ್ ತೊಟ್ಟು ಬಂದಿದ್ದರು.