ಬೆಂಗಳೂರು: ಸಂಜು ವೆಡ್ಸ್ ಗೀತಾ 2 ಸಿನಿಮಾ ಸಾಕಷ್ಟು ಅಡೆತಡೆಗಳನ್ನು ದಾಟಿ ಎರಡು ಸಲ ರಿಲೀಸ್ ಆಗಿದೆ. ಆದರೆ ಇದೀಗ ಚಿತ್ರದ ನಾಯಕ ನಟಿ ರಚಿತಾ ರಾಮ್ ವಿರುದ್ಧವೇ ಚಿತ್ರತಂಡ ತಿರುಗಿ ಬಿದ್ದಿದೆ. ಫಿಲ್ಮ್ ಚೇಂಬರ್ ಗೆ ಹೋಗಿ ನಿರ್ದೇಶಕ ನಾಗಶೇಖರ್ ಹಾಗೂ ನಟ ಶ್ರೀನಗರ ಕಿಟ್ಟಿ ದೂರು ನೀಡಿದ್ದಾರೆ. ಸಿನಿಮಾ ಪ್ರಮೋಷನ್ ಬರುತ್ತಿಲ್ಲ ಎಂದೇ ಆಕ್ರೋಶ ಹೊರಹಾಕಿದ್ದಾರೆ.
ಇಂದು ದೂರು ನೀಡಿದ ನಾಗಶೇಖರ್ ಅವರು, ರಮ್ಯಾ, ತಮನ್ನಾ ಎಲ್ಲರಿಗೂ ಸಿನಿಮಾ ಮಾಡಿದ್ದೀನಿ. ಆದರೆ ಇಂಥ ಸಮಸ್ಯೆಯನ್ನ ಯಾವ ನಟಿಯೂ ನೀಡಿಲ್ಲ. ಸಂಜು ವೆಡ್ಸ್ ಗೀತಾ 2 ಸಿನಿಮಾ ಪ್ರಮೋಷನ್ ಗೆ ಬಂದಿಲ್ಲ. ಹೀಗಾಗಿ ರಚಿತಾ ರಾಮ್ ವಿರುದ್ಧ ನಿರ್ದೇಶಕರು ತಿರುಗಿ ಬಿದ್ದಿದ್ದಾರೆ.
ನಮ್ಮ ಸಿನಿಮಾಗೆ ರಚಿತಾ ರಾಮ್ ಒಂಚೂರು ಸಪೋರ್ಟ್ ಮಾಡಿಲ್ಲ. ರಾಕ್ಲೈನ್ ವೆಂಕಟೇಶ್ ಅವರು ಹೇಳಿದ್ರು ಕೂಡ ಕೇಳಿಲ್ಲ. ನಾವೂ ಇಂತಹ ಕಲಾವಿದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಸಂಜು ವೆಡ್ಸ್ ಗೀತಾ ಸಿನಿಮಾ ಇಷ್ಟು ದಿನ ಪ್ರದರ್ಶನ ಕಂಡರು ಒಂದು ದಿನವೂ ಪ್ರಚಾರಕ್ಕೆ ಬಂದಿಲ್ಲ. ಶಿವಣ್ಣ, ಉಪೇಂದ್ರ, ಸುದೀಪ್ ಅಂತವರೇ ಈ ಸಿನಿಮಾವನ್ನ ಬೆಂಬಲಿಸಿದ್ದಾರೆ. ನಾವೇನು ಪೇಮೆಂಟ್ ಕಡಿಮೆ ಕೊಟ್ಟಿಲ್ಲ ಎಂದು ನಾಗಶೇಖರ್ ಗರಂ ಆಗಿದ್ದಾರೆ. ಜೊತೆಗೆ ಫಿಲ್ಮ್ ಚೇಂಬರ್ ಗೆ ಕನ್ನಡ ಸಿನಿಮಾಗಳಿಗೆ ಥಿಯೇಟರ್ ಸಮಸ್ಯೆ ಕುರಿತಾಗಿಯೂ ದೂರು ನೀಡಿದ್ದಾರೆ. ರಚಿತಾ ರಾಮ್ ಪೇಮೆಂಟ್ ತಗೊಂಡ್ರು ತಮ್ಮ ಸಿನಿಮಾದ ಪ್ರಚಾರಕ್ಕೆ ಬರ್ತಾ ಇಲ್ಲ ಎಂಬುದರ ಕುರಿತಾಗಿಯೂ ಬೇಸರ ಹೊರ ಹಾಕಿದ್ದಾರೆ.




