ಉಡುಪಿ: ಎಂಬಿ ಪಾಟೀಲ್ ಮತ್ತು ಅಶ್ವತ್ಥ್ ನಾರಾಯಣ್ ಭೇಟಿ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ರಕ್ಷಣೆಯ ಭೇಟಿ ಎಂದಿದ್ದರು. ಈ ಹೇಳಿಕೆಗೆ ಸ್ವತಃ ಎಂಬಿ ಪಾಟೀಲ್ ಕೂಡ ಆಕ್ರೋಶಗೊಂಡಿದ್ದರು. ಯಾಕೆ ಅವರು ಯಾರನ್ನು ಭೇಟಿ ಮಾಡಲ್ವಾ ಎಂದಿದ್ದರು. ಈ ಸಂಬಂಧ ನಟಿ ರಮ್ಯಾ ಟ್ವೀಟ್ ಮೂಲಕ ಎಂ ಬಿ ಪಾಟೀಲ್ ಪರ ಬ್ಯಾಟ್ ಬೀಸಿದ್ದರು. ಇದೀಗ ಅದೆ ವಿಚಾರಕ್ಕೆ ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ರಮ್ಯಾ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಡಿ ಕೆ ಶಿವಕುಮಾರ್ ತುಂಬಾ ಕ್ಲಿಯರ್ ಆಗಿ ಇವತ್ತಿನ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ. ಎಂಬಿ ಪಾಟೀಲ್ ಅವರ ಮನೆಗೆ ಅಶ್ವತ್ಥ್ ನಾರಾಯಣ್ ಅವರು ಬಂದಿದ್ದರು ಅಂತ ಯಾರೋ ಮಾಧ್ಯಮದವರು ಕೇಳಿದ್ದರು. ಆಗ ಹೌದು, ಬಂದಿರಬಹುದು ಎಂದು ಹೇಳಿದ್ದಾರೆಯೇ ವಿನಃ ಎಲ್ಲಿಯೂ ಹೋಗಿದ್ದಾರೆ ಎಂದು ಹೇಳಿಲ್ಲ. ರಮ್ಯಾ ಟ್ವೀಟ್ ಮಾಡಿರುವುದರ ಹಿಂದೆ ಏನೋ ಒಳ ಉದ್ದೇಶ ಇರಬೇಕು ಎಂದಿದ್ದಾರೆ.
ರಮ್ಯಾ ಟ್ವೀಟ್ ಮಾಡಿದ್ದಕ್ಕೆ ಯಾರು ಹೆಚ್ಚಾಗಿ ಇಂಪಾರ್ಟೆನ್ಸ್ ಕೊಡಬೇಡಿ. ರಮ್ಯಾ ಈ ರೀತಿಯ ಚೀಪ್ ಪಾಲಿಟಿಕ್ಸ್ ಮಾಡಬಾರದು. ರಮ್ಯಾರ ಹಳೆ ಟ್ವೀಟ್ ಗಳನ್ನು ತೆಗೆದುಕೊಂಡು ನೋಡಿ, ಬರೀ ಸಿನಿಮಾಗಳ ಬಗ್ಗೆ ಇದೆ. ಇತ್ತೀಚೆಗೆ ಯಾವುದೇ ರೀತಿಯಲ್ಲೂ ರಾಜಕೀಯದ ಬಗ್ಗೆ ಟ್ವೀಟ್ ಮಾಡಿರಲಿಲ್ಲ. ಆದರೆ ಇದಕ್ಕಿದ್ದ ಹಾಗೇ ನಮ್ಮ ನಾಯಕರ ವಿರುದ್ಧ ಟ್ವೀಟ್ ಮಾಡಿದ್ದಾರೆ ಎಂದು ಗರಂ ಆಗಿದ್ದಾರೆ.