ಕಳೆದ ಕೆಲವು ದಿನಗಳ ಹಿಂದೆ ಕಿಚ್ಚ ಸುದೀಪ್ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಬೆದರಿಕೆ ಪತ್ರವನ್ನು ಪೋಸ್ಟ್ ಮಾಡಿ, ನಿನ್ನ ಅಸಲಿ ಮುಖ ತೋರಿಸುತ್ತೇನೆ ಎಂದು ಬರೆದಿದ್ದರು. ಜೊತೆಗೆ ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆಯನ್ನು ಹಾಕಿದ್ದರು. ಈ ಸಂಬಂಧ ನಿರ್ಮಾಪಕ ಜ್ಯಾಕ್ ಮಂಜು ದೂರನ್ನು ನೀಡಿದ್ದರು. ಇದೀಗ ಆ ಪತ್ರ ಕೊಟ್ಟ ವ್ಯಕ್ತಿಯ ಬಂಧನವಾಗಿದೆ. ಆ ರಮೇಶ್ ಕಿಟ್ಟಿ.
ಪೊಲೀಸರು ಈ ಕೇಸನ್ನು ಸಿಸಿಬಿಗೆ ವಹಿಸಿದ್ದರು. ಕಳೆದ ಎರಡು ತಿಂಗಳಿನಿಂದ ಬೆದರಿಕೆ ಪತ್ರ ಕೊಟ್ಟವರ ಹುಡುಕಾಟ ನಡೆಯುತ್ತಲೇ ಇತ್ತು. ಈಗ ರಮೇಶ್ ಕಿಟ್ಟಿಯ ಬಂಧನವಾಗಿದೆ. ರಮೇಶ್ ಕಿಟ್ಟಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಅದರ ಜೊತೆಗೆ ಕಿಚ್ಚನಿಗೆ ಆತ್ಮೀಯರು ಆಗಿದ್ದವರು. ಕೆಲ ಕಾಲ ಕಿಚ್ಚ ಚಾರಿಟಬಲ್ ಟ್ರಸ್ಟ್ ಅನ್ನು ಇವರೇ ನೋಡಿಕೊಳ್ಳುತ್ತಿದ್ದರು. ಜೊತೆಗೆ ಎರಡು ಕೋಟಿ ಹಣವನ್ನು ಹೂಡಿಕೆ ಮಾಡಿದ್ದರಂತೆ.
ಹೂಡಿಕೆ ಮಾಡಿದ್ದ ಹಣ ಕೇಳಿದಾಗ ಸುದೀಪ್ ಹಿಂತಿರಿಗಿಸಲಿಲ್ಲ. ಹೀಗಾಗಿ ಸುದೀಪ್ ಅವರಿಗೆ ಬೆದರಿಕೆ ಪತ್ರ ಬರೆದಿದ್ದಾರೆ ಎನ್ನಲಾಗುತ್ತಿದೆ. ಇನ್ನು ಹಲವರ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದು, ಇಮ್ನು ಸತ್ಯ ಹೊರ ಬರಬೇಕಿದೆ.





GIPHY App Key not set. Please check settings