ಬೆಳಗಾವಿ: ಕಳೆದ ಕೆಲವು ವರ್ಷಗಳಿಂದ ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಬದ್ಧ ವೈರಿಗಳಾಗಿದ್ದಾರೆ. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿಲ್ಲ. ಹೇಗಾದರೂ ಮಾಡಿ ವಿರೋಧಿಯನ್ನು ಸೋಲಿಸಿ ನಾವೇ ಗೆಲ್ಲಬೇಕೆಂದು ಇಬ್ಬರು ಪಣ ತೊಟ್ಟಿದ್ದಾರೆ. ಅದಕ್ಕೆಂದೆ ಹೋರಾಟ ನಡೆಸುತ್ತಿದ್ದಾರೆ. ಇದೀಗ ಅಷ್ಟು ಬದ್ಧ ವೈರಿಗಳ ಕಾರು ಮುಖಾಮುಖಿಯಾದರೆ ಏನಾಗುತ್ತೆ..? ಅಂತದ್ದೊಂದು ಘಟನೆ ಇಂದು ರಾಜಹಂಸಘಡ ಕೋಟೆ ಬಳಿ ನಡೆದಿದೆ.
ರಮೇಶ್ ಜಾರಕಿಹೊಳಿ ಇದ್ದ ಕಾರು ಹಾಗೂ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿಯಿದ್ದಂತ ಕಾರು ಮುಖಾಮುಖಿಯಾಗಿದ್ದಾರೆ. ಅದರಲ್ಲೂ ರಾಜಹಂಸಗಡದಲ್ಲಿಯೇ ಮುಖಾಮುಖಿಯಾಗಿದ್ದು ಎಲ್ಲರು ಸಿನಿಮಾದ ರೀತಿಯಲ್ಲಿ ನೋಡುತ್ತಾ ನಿಂತಿದ್ದರು. ಯಾಕಂದ್ರೆ ರಾಜಹಂಸಗಡದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಕ್ರೆಡಿಟ್ ಪಾಲಿಟಿಕ್ಸ್ ಶುರುವಾಗಿದೆ.
ಕಾಂಗ್ರೆಸ್ ನಾಯಕರಿಂದ ರಾಜಹಂಸಗಡ ಕೋಟೆಯಲ್ಲಿ ಶಿವಾಜಿ ಪ್ರತಿಮೆ ಉದ್ಘಾಟನೆ ಮಾಡಿಸಲು ಲಕ್ಷ್ಮೀ ಹೆಬ್ಬಾಳ್ಕರ್ ಪ್ಲ್ಯಾನ್ ನಡೆಸಿದ್ದಾರೆ. ಮಾರ್ಚ್ 5ರಂದು ಡೇಟ್ ಕೂಡ ಫಿಕ್ಸ್ ಆಹಿದೆಯ. ಆದರೆ ಇದು ಆಗದಂತೆ ಯಡೆಯುವುದಕ್ಕೆ ರಮೇಶ್ ಜಾರಕಿಹೊಳಿ ಸಜ್ಜಾಗಿದ್ದಾರೆ. ಇಷ್ಟೆಲ್ಲಾ ಪಾಲಿಟಿಕ್ಸ್ ಇರುವಾಗಲೇ ರಾಜಹಂಸಗಡದಲ್ಲಿಯೇ ಇಬ್ಬರು ಮುಖಾಮುಖಿಯಾಗಿದ್ದರು.
ಇಬ್ಬರ ಕಾರು ಒಂದೇ ಲಡೆ ನಿಂತಿದ್ದರಿಂದ ಎರಡು ಪಕ್ಷದ ಕಾರ್ಯಕರ್ತರು ಕಿರುಚುವುದಕ್ಕೆ ಶುರು ಮಾಡಿದರು. ಸ್ವಲ್ಪ ಸಮಯ ಗೊಂದಲದ ವಾತಾವರಣವೇ ನಿರ್ಮಾಣವಾಗಿತ್ತು. ಬಳಿಕ ರಮೇಶ್ ಜಾರಕಿಹೊಳಿ ಕಾರು ನಿಲ್ಲಿಸಿ, ಕೋಟೆ ಒಳಗೆ ನಡೆದೆ ಹೋದರು. ಚನ್ನರಾಜ್ ಕಾರು ಸ್ವಲ್ಪ ದೂರಕ್ಕೆ ತೆಗೆದುಕೊಂಡು ಹೋಗಲಾಯಿತು. ಬಳಿಕ ಪರಿಸ್ಥಿತಿ ತಿಳಿಯಾಗಿತ್ತು.