ಬೆಳಗಾವಿ : ಸದ್ಯ ರಾಜ್ಯ ರಾಜಕಾರಣದಲ್ಲಿ ಘರ್ ವಾಪಾಸಿ ಎಂಬುದು ಜೋರು ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದವರು ಮತ್ತೆ ಮರಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ಸರ್ಕಾರ ಕೆಡವಿ ಬಿಜೆಪಿ ಸೇರಿದ್ದರು. ಆ ಟೀಮ.ಗೆ ಬಾಂಬೆ ಟೀಂ ಅಂತಾನು ಕರೆಯಲಾಗಿತ್ತು. ಆ ಟೀಂನಲ್ಲಿ ರಮೇಶ್ ಜಾರಕಿಹೊಳಿ ಕೂಡ ಪ್ರಮುಖ ಪಾತ್ರ ವಹಿಸಿದ್ದವರು.
ಇದೀಗ ಒಂದಷ್ಟು ಶಾಸಕರು ವಾಪಾಸಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆ ರಮೇಶ್ ಜಾರಕಿಹೊಳಿ ಏನು ಮಾಡ್ತಾರೆ ಎಂಬ ಚರ್ಚೆಗಳು ಶುರುವಾಗಿದೆ. ಒಂದು ಮಾಹಿತಿಯ ಪ್ರಕಾರ ಯಾರೇ ವಾಪಾಸ್ ಕಾಂಗ್ರೆಸ್ ಗೆ ಹೋದರೂ ಕೂಡ ರಮೇಶ್ ಜಾರಕಿಹೊಳಿ ಮಾತ್ರ ವಾಪಾಸ್ ಹೋಗೋದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ಅದರ ಬದಲು ಬಿಜೆಪಿಯಲ್ಲಿ ಇದ್ದುಕೊಂಡೆ, ಪಕ್ಷ ಸಂಘಟನೆ ಮಾಡಿದರೆ, ಇಲ್ಲಿಯೇ ಒಳ್ಳೆಯ ಅಧಿಕಾರ ತಮ್ಮದಾಗುತ್ತದೆ ಎಂಬ ಅಭಿಪ್ರಾಯ ಹೊಂದಿದ್ದಾರೆ. ಅದಕ್ಕಾಗಿಯೇ ಬಿಜೆಪಿ ಪಕ್ಷದ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರನ್ನು ಭೇಟಿಯಾಗಿ, ಮುಕ್ತವಾಗಿ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಅದುವೆ ಪಕ್ಷ ಸಂಘಟನೆಯ ಬಗ್ಗೆ.
ಇನ್ನು ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಬೆನ್ನಲ್ಲೇ ಪಕ್ಷ ಸಂಘಟನೆ ಹಾಗೂ ಪಕ್ಷದ ಗೆಲುವುಗಾಗಿ ದುಡಿಯಲು ಹೊರಟಿದ್ದಾರೆ ರಮೇಶ್ ಜಾರಕಿಹೊಳಿ. ಜೊತೆಗೆ ಬಿಜೆಪಿಯಲ್ಲಿಯೇ ಇರುವುದಕ್ಕೆ ಹಲವು ಕಾತಣಗಳು ಇದೆ. ಕಾಂಗ್ರೆಸ್ ನಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಡಿಕೆ ಶಿವಕುಮಾರ್ ಪ್ರಾಬಲ್ಯವನ್ನು ಸಹಿಸಿಕೊಳ್ಳಬೇಕಾಗುತ್ತದೆ. ಈಗಂತು ಬೆಳಗಾವಿಯಲ್ಲಿ ನಾನಾ ನೀನಾ ಎಂಬಂತಿದ್ದಾರೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ರಮೇಶ್ ಜಾರಕಿಹೊಳಿ. ಬಿಟ್ಟು ಬಂದ ಪಕ್ಷವನ್ನೇ ಮತ್ತೆ ಸೇರಿದರೆ ಗೌರವ ಇರಲ್ಲ ಅನ್ನೋದು ರಮೇಶ್ ಜಾರಕಿಹೊಳಿ ಅವರ ಅಭಿಪ್ರಾಯವಾಗಿದೆ.