ಬೆಂಗಳೂರು: ನಿನ್ನೆ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಅದುವೆ ವಿಪಕ್ಷ ನಾಯಕನ ಆಯ್ಕೆ. ಕಳೆದ ಆರು ತಿಂಗಳಿನಿಂದ ವಿಪಕ್ಷ ನಾಯಕನ ಹುದ್ದೆ ಹಾಗೂ ರಾಜ್ಯಾಧ್ಯಕ್ಷ ಹುದ್ದೆ ಖಾಲಿ ಇತ್ತು. ಲೋಕಸಭಾ ಚುನಾವಣೆಗೂ ಮುನ್ನ ಎರಡು ಹುದ್ದೆಗಳು ತುಂಬಿವೆ. ನಿನ್ನೆ ಶಾಸಕಾಂಗ ಸಭೆ ನಡೆದಿದ್ದು, ಕೇಂದ್ರದಿಂದ ಬಂದಿದ್ದ ವೀಕ್ಷಕರ ಎದುರು ಆರ್ ಅಶೋಕ್ ಹೆಸರು ಫೈನಲ್ ಆಗಿದೆ. ನೂತನವಾಗಿ ವಿಪಕ್ಷ ನಾಯಕರಾಗಿದ್ದಾರೆ.
ಆದರೆ ನಿನ್ನೆ ನಡೆದ ಶಾಸಕಾಂಗ ಸಭೆಯಿಂದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಇಬ್ಬರು ಹೊರ ನಡೆದಿದ್ದರು. ಒಂದೇ ಕಾರಿನಲ್ಲಿ ವಾಪಾಸ್ ಆಗಿದ್ದರು. ವಿಪಕ್ಷ ನಾಯಕನ ಹುದ್ದೆಗೆ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಆಕಾಂಕ್ಷಿಯಾಗಿದ್ದರು. ಆದರೆ ಆ ಹುದ್ದೆ ಕೈತಪ್ಪಿದ ಕಾರಣಕ್ಕೆ ವಾಪಾಸ್ ಆಗಿದ್ದರು. ಇದೀಗ ರಮೇಶ್ ಜಾರಕಿಹೊಳಿ ಅವರು ವಾಪಾಸ್ ಆದ ಕಾರಣ ಈಗ ಹೊರಬಿದ್ದಿದೆ.
ಕೇಂದ್ರದಿಂದ ಆಗಮಿಸಿದ್ದಂತ ವೀಕ್ಷಕರ ಎದುರು ರಮೇಶ್ ಜಾರಕಿಹೊಳಿ ಅವರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ. ಅದುವೆ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ. ನಮಗಿಂತ ಕಿರಿಯ ವಯಸ್ಸಿನ ವಿಜಯೇಂದ್ರ ಕೆಳಗೆ ನಾವು ಕೆಲಸ ಮಾಡೋದು ಹೇಗೆ?. ಬಿಎಸ್ವೈಗೆ ರಾಜಾಧ್ಯಕ್ಷ ಸ್ಥಾನ ನೀಡಿದ್ದರೇ ಒಪ್ಪಿಕೊಳ್ಳುತ್ತಿದ್ದೇವು. ಆ ಸ್ಥಾನಕ್ಕೆ ಪಕ್ಷದಲ್ಲಿನ ಇತರೆ ಹಿರಿಯರನ್ನ ಪರಿಗಣಿಸಬೇಕಿತ್ತು. ನಮಗಿಂತ ಕಿರಿಯರ ಮುಂದೆ ನಾವು ಕೆಲಸ ಮಾಡುವುದು ಹೇಗೆ ಎಂದು ಸಾಹುಕಾರ ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ.