ಬೆಳಗಾವಿ: ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದಂತ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆಗೆ ಶರಣಾಗಿದ್ದು, ನೇರವಾಗಿ ಈಶ್ವರಪ್ಪರೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ. ಕಾಂಗ್ರೆಸ್ ನಾಯಕರು ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ.
ಈ ಸಂಬಂಧ ಮಾತನಾಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಹೊಸ ಬಾಂಬ್ ಸಿಡಿಸಿದ್ದಾರೆ. ಸಂತೋಷ್ ಪಾಟೀಲ್ ಅವರು ಹಳೆಯ ಕಾರ್ಯಕರ್ತ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಹೆಂಡತಿಗೆ ಸಣ್ಣ ಮಗು ಇದೆ. ಅದನ್ನು ಬೆಳೆಸಲು ಏನು ಸಹಾಯ ಬೇಕು ಅದನ್ನು ಸರ್ಕಾರ ಕೂಡ ಮಾಡುತ್ತೆ. ಸೋಮವಾರ ಒಂದು ಪ್ರೆಸ್ ಮೀಟ್ ಮಾಡ್ತೀನಿ. ಇದು ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ ಸೇಮ್ ಷಡ್ಯಂತ್ರದಲ್ಲಿ ಬೀಳಿಸುವಂತ ಟೀಂ ಇದೆ. ಅದನ್ನು ಖುಲಾಷ್ ಮಾಡಬೇಕು. ಹೈಕಮಾಂಡ್ ಜೊತೆ ಆ ಬಗ್ಗೆ ಮಾತನಾಡುತ್ತೇನೆ ಎಂದಿದ್ದಾರೆ.
ಈಶ್ವರಪ್ಪ ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬಾರದು. ಅವರ ತಪ್ಪಿದ್ರೆ ಕೋರ್ಟ್ ಶಿಕ್ಷೆ ಕೊಡಲಿ. ಷಡ್ಯಂತ್ರಕ್ಕೆ ಅವರು ನನ್ನಂತೆ ಬಲಿಯಾಗಬಾರದು. ಅವನು ಸಾಯಬಾರದಿತ್ತು, ಸತ್ತು ಹೋಗಿದ್ದಾನೆ. ಸೋಮವಾರ ಎಲ್ಲಾ ಹೇಳ್ತೀನಿ. ನಂದು ಸಿಡಿ ಕೇಸ್ ಪೆಂಡಿಂಗ್ ಇದೆ. ನನ್ನ ಕೇಸ್ ಹಾಗೂ ಈ ಕೇಸ್ ಎರಡು ಕೊಡಬೇಕು. ನನ್ನ ವಿರುದ್ಧ ಷಡ್ಯಂತ್ರ ಮಾಡಿಸಿದ ಟೀಂ ಈಶ್ವರಪ್ಪ ವಿರುದ್ಧ ಷಡ್ಯಂತ್ರ ನಡೆಸಿದೆ ಎಂದಿದ್ದಾರೆ.