ಬೆಳಗಾವಿ: ಚುನಾವಣೆ ಹತ್ತಿರ ಸಂಭವಿಸುತ್ತಿದ್ದಂತೆ ರಾಜಕಾರಣಿಗಳು ಅಲರ್ಟ್ ಆಗಿದ್ದಾರೆ. ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದು, ಜನರ ಬಳಿ ಸಂಚಾರ ಆರಂಭಿಸಿದ್ದಾರೆ. ಜೊತೆಗೆ ಜನರಿಗೆ ಹಲವು ಭರವಸೆಗಳನ್ನು ನೀಡುತ್ತಿದ್ದಾರೆ. ಹಾಗೆಯೇ ಎದುರಾಳಿಯ ವಿರುದ್ಧ ವಾಗ್ದಾಳಿಯನ್ನು ಮಾಡುತ್ತಿದ್ದಾರೆ. ಇದೀಗ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ರಮೇಶ್ ಜಾರಕಿಹೊಳಿ ನಡುವೆ ಹಣ ಹಂಚಿಕೆ ವಿಚಾರದಲ್ಲಿ ವಾಕ್ಸಮರ ನಡೆದಿದೆ.
ಉತ್ತಿಚೆಗೆ ರಮೇಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕೆಟ್ಟ ಹುಳು. ಆರು ಸಾವಿರ ಹಣ ಕೊಟ್ರೆ ಮಾತ್ರ ವೋಟು ಹಾಕಿ. ಅವರು ಖರ್ಚು ಮಾಡುವುದಕ್ಕಿಂತ ಹತ್ತು ಕೋಟಿ ಹೆಚ್ಚು ಖರ್ಚು ಮಾಡುತ್ತೀನಿ ಎಂದಿದ್ದರು. ಬೆಳಗಾವಿಯಲ್ಲೆಲ್ಲಾ ಈಗ ಆಡಿಯೋದೆ ಸದ್ದು, ಸುದ್ದಿ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲಕ್ಷ್ಮೀ ಹೆಬ್ಬಾಳ್ಕರ್, ಗೆಲ್ಲುವುದಕ್ಜೆ ನಾನು ಚುನಾವಣೆಗೆ ನಿಲ್ಲುತ್ತೇನೆ. ಸೋಲಿಸುವುದಕ್ಕೆ ಪ್ರಯತ್ನ ಮಾಡುವವರು ಸೋಲಿಸುವುಕ್ಕೆ ಪ್ರಯತ್ನ ಮಾಡುತ್ತಾರೆ. ಕಾಲಾಯ ತಸ್ಮೈ ನಮಃ ಅಂತಾರೆ. ನೊಡೋಣಾ. ಅವರು ಈ ಮುಂಚೆಯಿಂದಾನು ಹೆಣ್ಣು ಮಗಳಿಗೆ ಅಗೌರವ ಸೂಚಿಸುತ್ತಾನೆ ಬಂದಿದ್ದಾರೆ.
ನಾನು ಇಡೀ ಬಿಜೆಪಿಯನ್ನು ಬೈಯ್ಯುವುದಕ್ಕೆ ಹೋಗುವುದಿಲ್ಲ. ಆರು ಸಾವಿರ ದುಡ್ಡು ಕೊಟ್ಟರೆ ವೋಟ್ ಹಾಕಿ ಅನ್ನೋದು ಮೂರ್ಖತನ. ನನ್ನ ಕ್ಷೇತ್ರದ ಮತದಾರರು ಬಹಳ ಸ್ವಾಭಿಮಾನಿಗಳು. ಅವರಿಗೆ ಯಾರು..? ಏನು ಅನ್ನೋದು ಅರ್ಥವಾಗುತ್ತೆ ಎಂದಿದ್ದಾರೆ.