ತುಮಕೂರು: ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅನ್ಯಾಯವಾಗಿದ್ದರೆ ಅವರಿಗೆ ನ್ಯಾಯ ಒದಗಿಸಿಕೊಡುತ್ತೇವೆ. ಅವರು ಸಿಡಿ ವಿಚಾರಕ್ಕೆ ದಾಖಲೆಗಳನ್ನು ನೀಡಿದರೆ ಪೊಲೀಸರು ಅದರ ತನಿಖೆ ನಡೆಸುತ್ತಾರೆ ಎಂದಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಹನಿಟ್ರ್ಯಾಪ್ ಮೂಲಕ ನನ್ನ ಸಿಡಿ ಮಾಡಿಸಿದ್ದಾರೆ. ಸಿಬಿಐನಿಂದ ತನಿಖೆ ನಡೆಸಿದರೆ ಖಂಡಿತ ಸತ್ಯ ಹೊರಬರಲಿದೆ ಎಂದು ಆರೋಪ ಮಾಡಿದ್ದರು. ಹೀಗಾಗಿ ಸೂಕ್ತ ದಾಖಲೆ ನೀಡಿದರೆ ತನಿಖೆ ನಡೆಸುತ್ತೇವೆ ಎಂದಿದ್ದಾರೆ.
ಇನ್ನು ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಗರಂ ಆದ ಗೃಹ ಸಚಿವ ಪರಮೇಶ್ವರ್, ರಾಜ್ಯ ಬರದಿಂದ ತತ್ತರಿಸಿದ್ದರೆ, ಕೇಂದ್ರದಿಂದ ಬಂದಿದ್ದಂತ ಅಧ್ಯಯನ ತಂಡದ ಅಧಿಕಾರಿಗಳಿಗೆ, ಇಲ್ಲಿನ ಬರ ಕಾಣಿಸುತ್ತಿಲ್ಲ. ಹಸಿರು ಚೆನ್ನಾಗಿದೆ ಎಂದು ವರದಿ ನೀಡಿದ್ದಾರೆ. ಇವರಿಗೆ ಕಣ್ಣು ಕಾಣಿಸುವುದಿಲ್ಲವೆ..? ಬರ ಅಂದಾಜಿಸಿ 17 ಸಾವಿರ ಕೋಟಿ ಹಣ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಆದರೆ ಇಲ್ಲಿಯ ತನಕ ಒಂದೇ ಒಂದು ಪೈಸೆ ಹಣವನ್ನು ಬಿಡುಗಡೆ ಮಾಡಿಲ್ಲ ಎಂದು ಬೇಸರ ಹೊರ ಹಾಕಿದ್ದಾರೆ.
ಸಿಎಂ ಸಿದ್ದರಾಮಯ್ಯ ಕೂಡ ಇತ್ತೀಚೆಗೆ ಈ ವಿಚಾರದ ಬಗ್ಗೆ ಬೇಸರ ಹೊರ ಹಾಕಿದ್ದರು. ಮನವಿ ಕಳುಹಿಸಿದ್ದರು ಕೂಡ ಕೇಂದ್ರದಿಂದ ಬರ ಪರಿಹಾರಕ್ಕಾಗಿ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ ಎಂದು ತಿಳಿಸಿದ್ದರು. ಎಲ್ಲೆಡೆ ಮಳೆ ಸಂಪೂರ್ಣವಾಗಿ ಹೋಗಿದ್ದು, ರೈತರ ಜಮೀನಿನಲ್ಲಿ ಹಾಕಿರುವ ಪೈರುಗಳೆಲ್ಲಾ ಸೀದು ಹೋಗಿದೆ. ಜನ ಹೇಗೋ ಕಾಲದೂಡುತ್ತಾರೆ. ಆದರೆ ಈ ಬೇಸಿಗೆಗೆ ಜಾನುವಾರುಗಳ ಕಥೆ ಏನು ಎಂಬುದೇ ರೈತನ ಚಿಂತೆಯಾಗಿದೆ.