ಬೆಂಗಳೂರು: ಕರುನಾಡ ಮನೆ ಮಗ.. ಎಲ್ಲರ ರಾಜಕುಮಾರ ನಮ್ಮನಗಲಿ ಎಂಟು ದಿನ. ಆದ್ರೆ ಯಾರಿಗೂ ಆ ಸತ್ಯವನ್ನ ಅರಗಿಸಿಕೊಳ್ಳೊಕದಕ್ಕೆ ಆಗ್ತಾ ಇಲ್ಲ. ಅಪ್ಪು ಇನ್ನಿಲ್ಲ ಅಂದ್ರೆ ಮನಸ್ಸು ಕೇಳುತ್ತಿಲ್ಲ. ಅಪ್ಪು ಯಾಕೆ ಇಷ್ಟು ಬೇಗ ಹೋದಿರಿ ಅಂತ ಅದೆಷ್ಟೋ ಮನಸ್ಸುಗಳು ಈಗಲೂ ಕೇಳ್ತಿವೆ. ಆದ್ರೆ ಅದಕ್ಕೆ ಉತ್ತರವಿಲ್ಲ. ಈ ಮಧ್ಯೆ ಅಪ್ಪು ಮೊದಲು ಆಸ್ಪತ್ರೆಗೆ ಬಂದ ವೈದ್ಯರ ಮೇಲೆ ಕೆಲವು ಅಭಿಮಾನಿಗಳಿಗೆ ಆಕ್ರೋಶ ಉಂಟಾಗಿದೆ.
ರಮಣಶ್ರೀ ಕ್ಲೀನಿಕ್ ಗೆ ಪುನೀತ್ ಕುಟುಂಬ ಆಗಾಗ ಹೋಗ್ತಾ ಇದ್ರಂತೆ. ಮನೆ ಹತ್ತಿರವೇ ಆದ್ದರಿಂದ ಅಂದು ಎದೆ ನೋವು ಕಾಣಿಸಿಕೊಂಡಾಗಲೂ ಹೋಗಿದ್ದಾರೆ. ಡಾ. ರಮಣ ರಾವ್ ಅವರು ಪರೀಕ್ಷಿಸಿ, ಹೆಚ್ಚಿನ ಚಿಕಿತ್ಸೆಗೆಂದು ವಿಕ್ರಂ ಆಸ್ಪತ್ರೆಗೆ ಕಳುಹಿಸಿದ್ದಾರೆ. ಈ ಮಧ್ಯೆ ಆ್ಯಂಬುಲೆನ್ಸ್ ವ್ಯವಸ್ಥೆ ಕೂಡ ಮಾಡದೆ ಕಳುಹಿಸಿದ್ದಾರೆ ಅನ್ನೋದು ಹಲವರ ನೋವು.
ಈಗಾಗಲೇ ಅಭಿಮಾನಿಯೊಬ್ಬ ರಮಣ ರಾವ್ ವಿರುದ್ಧ ದೂರು ನೀಡಲು ಮುಂದಾಗಿದ್ದರು. ಅಂದಿನ ಘಟನೆ ಬಗ್ಗೆ ಸಂಪೂರ್ಣ ತನಿಖೆಯಾಗಬೇಕೆಂದು ಒತ್ತಾಯಿಸಿದ್ದರು. ಇದೀಗ ಈ ಎಲ್ಲಾ ಘಟನಾವಳಿಗಳಿಂದ ರಮಣ ರಾವ್ ಮನೆಗೆ ಬಿಗಿ ಭದ್ರತೆ ಒದಗಿಸಲಾಗಿದೆ.
ಸದಾಶಿವನಗರದಲ್ಲಿರುವ ರಮಣ ರಾವ್ ಕ್ಲಿನಿಕ್ ಮತ್ತು ಮನೆಗೆ ಪೊಲೀಸ್ ಭದ್ರತೆ ನೀಡಲಾಗಿದೆ. ಅಪ್ಪು ಸಾವಿಗೂ ಮುನ್ನ ರಮಣರಾವ್ ಕ್ಲಿನಿಕ್ ಗೆ ಹೋಗಿದ್ದರು. ಈ ವೇಳೆ ರಮಣರಾವ್ ಸರಿಯಾಗಿ ನೋಡಿಲ್ಲ ಎಂದು ಕೆಲವು ಅಭಿಮಾನಿಗಳ ಆರೋಪ ಮಾಡಿದ್ದಾರೆ. ಈಗಾಗ್ಲೇ ಕೆಲವು ಕನ್ನಡ ಪರ ಸಂಘಟನೆಗಳು ರಮಣರಾವ್ ವಿರುದ್ಧ ದೂರು ನೀಡಿವೆ. ಈ ಹಿನ್ನೆಲೆ ರಮಣರಾವ್ ಮನೆಗೆ ಪೊಲೀಸ್ ಭಿಗಿ ಭದ್ರತೆ ಒದಗಿಸಲಾಗಿದೆ.