ರಾಮನಗರ: ವಿಧಾನಸಭಾ ಚುನಾವಣೆಗೆ ಇನ್ನು ವರ್ಷವಿದೆ. ಆದ್ರೆ ಎಲ್ಲಾ ಪಕ್ಷಗಳು ಹಿಂಗಿಂದಲೇ ಸಾಕಷ್ಟು ತಯಾರಿ ನಡೆಸಿಕೊಳ್ಳುತ್ತಿದ್ದಾರೆ. ಈ ನಡುವೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷ ಬಿಟ್ಟು ಬಿಜೆಪಿ ಸೇರಲು ತಯಾರಿ ನಡೆಸುತ್ತಿದ್ದಾರೆ.
ರಾಮನಗರ, ಚನ್ನಪಟ್ಟಣ, ಮಾಗಡಿ ತಾಲೂಕಿನಲ್ಲಿ ಜೆಡಿಎಸ್ ಅಧಿಕಾರದಲ್ಲಿದೆ. ತನ್ನದೇ ಆದ ನೆಲೆ ಉಳಿಸಿಕೊಂಡಿದೆ. ಆದ್ರೆ ಇದೀಗ ಈ ಜಿಲ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಪಕ್ಷ ತೊರೆಯುವುದರಲ್ಲಿದ್ದಾರೆ. ಅದು ಸಿಪಿ ಯೋಗೀಶ್ವರ್ ನೇತೃತ್ವದಲ್ಲಿ ಬಿಜೆಪಿ ಸೇರಲಿದ್ದಾರೆ.
ಚನ್ನಪಟ್ಟಣದಲ್ಲಿ ಸ್ಥಳೀಯರಿಗೆ ಬೆಲೆ ಕೊಡದೆ, ಬೆಂಗಳೂರಿನಿಂದ ಬಂದವರಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದಾರೆಂದು. ಹೀಗಾಗಿ ಪಕ್ಷಾಂತರ ಪರ್ವ ಅನಿವಾರ್ಯವೆಂದಿರುವ ಮುಖಂಡರೊಬ್ಬರು ಬಿಜೆಪಿ ಪಕ್ಷ ಸೇರುತ್ತಿದ್ದಾರೆ.
ಸಿಎಂ ಬೊಮ್ಮಾಯಿ, ನಳೀನ್ ಕುಮಾರ್ ಕಟೀಲು ನೇತೃತ್ವದಲ್ಲಿ ಜೆಡಿಎಸ್ ತೊರೆದವರು ಸೋಮವಾರ ಬಿಜೆಪಿ ಸೇರಲಿದ್ದಾರೆ ಎಂದು ಈಗಾಗಲೇ ಪರಿಷತ್ ಸದಸ್ಯ ಸಿಪಿ ಯೋಗೀಶ್ವರ್ ತಿಳಿಸಿದ್ದಾರೆ.