ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 31 : ದೇಶಾದ್ಯಂತ ಇಂದು ಸೋಮವಾರ ಮುಸಲ್ಮಾನರ ಪವಿತ್ರ ಹಬ್ಬ ಈದ್ ಉಲ್ ಫಿತರ್(ರಂಜಾನ್) ಆಚರಿಸಲಾಗುತ್ತಿದೆ. ನಗರದ ದಾವಣಗೆರೆ ರಸ್ತೆಯ ಟ್ರಾಫಿಕ್ ಪೊಲೀಸ್ ಠಾಣೆಯ ಸಮೀಪವಿರುವ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಶಾಂತಿ ಮತ್ತು ಸಹೋದರತ್ವದ ಹಬ್ಬವಾದ ಈದ್ ಅನ್ನು ಇಂದು ದೇಶಾದ್ಯಂತ ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತಿದೆ. ಬೆಳಗ್ಗಿನಿಂದ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಾ, ಪರಸ್ಪರ ಅಪ್ಪಿಕೊಂಡು, ಹೃತ್ಪೂರ್ವಕ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಈದ್-ಉಲ್-ಫಿತರ್ ಇಸ್ಲಾಂ ಧರ್ಮದಲ್ಲಿ ಆಚರಿಸಲಾಗುವ ಪವಿತ್ರ ಹಬ್ಬಗಳಲ್ಲಿ ಒಂದು. ರಂಜಾನ್ 30 ದಿನಗಳ ಉದ್ದಕ್ಕೂ ಮುಸ್ಲಿಮರು ಉಪವಾಸ ಆಚರಿಸುವ ಮೂಲಕ ಈ ತಿಂಗಳನ್ನು ವರ್ಷದ ಪವಿತ್ರ ತಿಂಗಳಾಗಿಸುತ್ತಾರೆ. ಈ ತಿಂಗಳಲ್ಲಿ, ಇಸ್ಲಾಂ ಧರ್ಮವನ್ನು ಅನುಸರಿಸುವ ಮುಸ್ಲಿಮರು ಸೂರ್ಯೋದಯಕ್ಕೂ ಮುನ್ನ ಸೂರ್ಯಾಸ್ತದವರೆಗೆ ಉಪವಾಸ ಇರುತ್ತಾರೆ. ಈ ತಿಂಗಳಲ್ಲಿ ಉಪವಾಸ ಮಾಡಿದ್ರೆ ಕಷ್ಟಸಂಕಷ್ಟಗಳು ಕಡಿಮೆಯಾಗುತ್ತವೆ ಎಂದು ಕೆಲವರು ನಂಬುತ್ತಾರೆ. ಈ ತಿಂಗಳಲ್ಲಿ ಮುಸ್ಲಿಮರು ಬಡವರಿಗೆ ದಾನ-ಧರ್ಮ ಮಾಡುವುದು ಹಾಗೂ ಹಸಿದವರಿಗೆ ಆಹಾರ ನೀಡುವಂಥ ಪುಣ್ಯ ಕಾರ್ಯಗಳನ್ನು ಮಾಡುತ್ತಾರೆ.


