ಮುದ್ದು ಮಗಳಿಗೆ ಪ್ರಕೃತಿಯ ಹೆಸರನ್ನಿಟ್ಟ ರಾಮ್ ಚರಣ್ ದಂಪತಿ

suddionenews
1 Min Read

 

ಮೆಗಾಸ್ಟಾರ್ ಚಿರಂಜೀವಿ ಮನೆಯಲ್ಲಿ ಮೊಮ್ಮಗಳ ಆಗಮನ ಖುಷಿ ಹೆಚ್ಚಾಗಿದೆ. ಇಂದು ಮೆಗಾಸ್ಟಾರ್ ಕುಟುಂಬಸ್ಥರು, ಮಗುವಿನ ನಾಮಕರಣ ಮಾಡಿ, ಮತ್ತಷ್ಟು ಖುಷಿ ವ್ಯಕ್ತಪಡಿಸಿದ್ದಾರೆ. ನಾಮಕರಣದ ಸಮಾರಂಭಕ್ಕೆ ಎರಡು ಕುಟುಂಬಸ್ಥರು ಭಾಗಿಯಾಗಿದ್ದರು. ಮಗು ಇನ್ನು ಹನ್ನೊಂದು ದಿನ. ಆದರೆ ಉಡುಗೊರೆಯ ಸುರಿಮಳೆಯೇ ಸಿಕ್ಕಿದೆ.

ಕಾರ್ಯಕ್ರಮ ಅದ್ದೂರಿಯಾಗಿದ್ದರು, ಮಗುವನ್ನು ಸಂಪ್ರದಾಯದಂತೆ ಬಟ್ಟೆಯ ತೊಟ್ಟಿಲಲ್ಲಿ ಮಗುವನ್ನು ಮಲಗಿಸಿ, ಆಚರಣೆ ಮಾಡಿದ್ದಾರೆ. ಮಗುವಿನ ಮುದ್ದಾದ ಹೆಸರನ್ನಿಟ್ಟಿದ್ದು, ಈಗಾಗಲೇ ಆ ಹೆಸರಿನ ಅರ್ಥದ ಹುಟುಕಾಟವೂ ಶುರುವಾಗಿದೆ.

‘ಕ್ಲಿಂಕಾರ ಕೊನಿಡೆಲಾ’ ಎಂದು ನಟ ಚಿರಂಜೀವಿ ಹೇಳಿದರು. ಈ ಹೆಸರನ್ನು ಇಡಲು ಕಾರಣವೇನು ಎಂಬುದಕ್ಕೆ ಉತ್ತರಿಸಿದ ಅವರು, “ಆ ಹೆಸರನ್ನು ಲಲಿತಾ ಸಹಸ್ರನಾಮ ನಾಮದಿಂದ ತೆಗೆದುಕೊಳ್ಳಲಾಗಿದೆ. ‘ಕ್ಲಿನ್ ಕಾರ’ ಎಂಬುದು ಪ್ರಕೃತಿಯ ಸಾಕಾರವನ್ನು ಪ್ರತಿನಿಧಿಸುತ್ತದೆ. ನಮ್ಮ ಪುಟ್ಟ ಮಗು, ಲಿಟಲ್ ಪ್ರಿನ್ಸೆಸ್ ಈ ಎಲ್ಲಾ ಗುಣಗಳನ್ನು ಮುಂದಿನ ದಿನಗಳಲ್ಲಿ ತನ್ನ ವ್ಯಕ್ತಿತ್ವದಲ್ಲಿ ಅಳವಡಿಸಿಕೊಳ್ಳುತ್ತಾಳೆ” ಎಂದು ಟ್ವೀಟ್ ಮಾಡಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *