10 ವರ್ಷಗಳ ಬಳಿಕ ತಂದೆಯಾಗುತ್ತಿದ್ದಾರೆ ರಾಮ್ ಚರಣ್ : ಮೆಗಾಸ್ಟಾರ್ ಕುಟುಂಬದಲ್ಲಿ ಸಂತಸವೋ ಸಂತಸ..!

suddionenews
1 Min Read

 

ಟಾಲಿವುಡ್ ಮೆಗಾಸ್ಟಾರ್ ಕುಟುಂಬಕ್ಕೆ ಹೊಸ ಸದಸ್ಯರ ಆಗಮನವಾಗುತ್ತಿದೆ. ರಾಮ್ ಚರಣ್ ಹಾಗೂ ಉಪಾಸನ ಪೋಷಕರಾಗುತ್ತಿದ್ದಾರೆ. ಈ ಸಂತಸದ ಸುದ್ದಿ ಕೇಳಿ ಇಡೀ ಬಳಗ ಶುಭ ಹಾರೈಸಿದ್ದಾರೆ.

ರಾಮ್ ಚರಣ್ ಹಾಗೂ ಉಪಾಸನ ಪ್ರೀತಿಸಿ ಮದುವೆಯಾಗಿದ್ದವರು. ಹತ್ತು ವರ್ಷದಿಂದ ಸುಖ ಸಾಂಸಾರಿಕ ಜೀವನವನ್ನು ಸಾಗಿಸುತ್ತಿದ್ದಾರೆ. ಇದೀಗ ಕುಟುಂಬಕ್ಕೆ ಹೊಸ ಅತಿಥಿಯ ಆಗಮನದ ಸಂತಸದ ಸುದ್ದಿಯನ್ನು ನೀಡಿದ್ದಾರೆ. ಈ ವಿಚಾರವನ್ನು ರಾಮ್ ಚರಣ್ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಹನುಮಾನ್ ಫೋಟೋ ಹಾಕಿ “ ಶ್ರೀ ಹನುಮಾನ್ ಆಶೀರ್ವಾದೊಂದಿಗೆ ಉಪಾಸನಾ ಮತ್ತು ರಾಮ್ ಚರಣ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ. ಈ ವಿಚಾರ ಹಂಚಿಕೊಳ್ಳಲು ನಮಗೆ ಸಂತೋಷವಾಗಿದೆ” ಎಂದು ಪೋಸ್ಟ್ ಹಾಕಿದ್ದಾರೆ. ಈ ವಿಚಾರ ಕೇಳಿದ ಅಭಿಮಾನಿಗಳು ತುಂಬಾ ಸಂತಸ ಪಟ್ಟಿದ್ದಾರೆ. ಕುಟುಂಬಸ್ಥರು ಕೂಡ ದಂಪತಿಗೆ ಶುಭ ಹಾರೈಸಿದ್ದಾರೆ. ಇನ್ನು ರಾಮ್ ಚರಣ್ ಮತ್ತು ಉಪಾಸನ ಇಬ್ಬರು 2012ರಲ್ಲಿ ಪ್ರೀತಿಸಿ, ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *