Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಿಗ್ ಬಾಸ್ ಮನೆಯಿಂದ ರಕ್ಷಿತಾ, ಧ್ರುವಂತ್ ಔಟ್ : ಆದರೆ..!

---Advertisement---

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಇಂದು ಬಿಗ್ ಸರ್ಪೈಸ್ ನೋಡುಗರಿಗೆ ಸಿಕ್ಕಿದೆ. ಕಳೆದ ಕೆಲವು ವಾರಗಳಿಂದ ಮನೆಗೆ ಹೋಗ್ಬೇಕು ಹೋಗ್ಬೇಕು ಅಂತ ಕಾಯುತ್ತಿದ್ದ ಧ್ರುವಂತ್ ಗೆ ಬಿಗ್ ಬಾಸ್ ಮನೆ ಕಡೆಯ ದಾರಿಯನ್ನೇ ತೋರಿದಂತೆ ಕಾಣಿಸ್ತಾ ಇದೆ. ಅದರಲ್ಲೂ ಈ ವಾರ ಇಬ್ಬರ ಎಲಿಮಿನೇಷನ್ ಆಗಿರೋದು ಎಲ್ಲರಿಗೂ ಶಾಕಿಂಗ್ ಸುದ್ದಿಯಾಗಿದೆ. ಆದರೂ ಯಾರೂ ಇದನ್ನ ನಂಬುವುದಕ್ಕೆ ಸಾಧ್ಯವಾಗ್ತಾ ಇಲ್ಲ.

ಹೌದು ಇದೇ ಮೊದಲ ಬಾರಿಗೆ ಎಲಿಮಿನೇಷನ್ ಎಪಿಸೋಡ್ ತೋರಿಸುವುದಕ್ಕೂ ಮುನ್ನವೇ ಪ್ರೋಮೋದಲ್ಲಿಯೇ ತೋರಿಸಲಾಗಿದೆ. ರಜತ್, ಧ್ರುವಂತ್ ಹಾಗೂ ರಕ್ಷಿತಾ ಮೂರು ಜನ ಡೇಂಜರ್ ಝೋನ್ ನಲ್ಲಿ ನಿಂತಿದ್ದರು. ಆಗ ಕಿಚ್ಚ ಸುದೀಪ್ ಅವರು ಇಬ್ಬರು ಈ ವಾರ ಹೊರಗೆ ಹೋಗುತ್ತಾ ಇದ್ದೀರಾ. ಅದರಲ್ಲಿ ಸೇಫ್ ಆಗುತ್ತಾ ಇರುವಂತ ಸ್ಪರ್ಧಿ ರಜತ್ ಅಂತಾರೆ. ಅಂದ್ರೆ ರಕ್ಷಿತಾ ಹಾಗೂ ಧ್ರುವಂತ್ ಆಟ ಈ ವಾರಕ್ಕೆ ಮುಗಿದಿದೆ ಅಂತ.

ಮಾಮೂಲಿಯಂತೆ ಐದು ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ರಕ್ಷಿತಾ ಕಣ್ಣೀರಾಕುತ್ತಲೇ ಮನೆಯಿಂದ ಹೊರಗೆ ಹೋಗ್ತಾರೆ. ಈ ಪ್ರೋಮೊಇ ನೋಡಿದ ಎಲ್ಲರಿಗೂ ಇದು ಫೇಕ್ ಎಲಿಮಿನೇಷನ್ ಅನ್ಸಿದೆ. ಅಂದ್ರೆ ಈ ವಾರ ಮನೆಯಿಂದ ಹೊರಗೆ ಯಾರೂ ಕೂಡ ಹೋಗ್ತಾ ಇಲ್ಲ. ಆ ಇಬ್ಬರನ್ನು ಸೀಕ್ರೇಟ್ ರೋಮಿನಲ್ಲಿ ಇಟ್ಟಿರಬಹುದು. ಮತ್ತೆ ಮನೆಯ ಒಳಗೆ ಬಂದೇ ಬರ್ತಾರೆ ಎನ್ನಲಾಗ್ತಾ ಇದೆ. ಒಟ್ನಲ್ಲಿ ರಕ್ಷಿತಾಗೆ ಎರಡನೇ ಬಾರಿಗೆ ಸೀಕ್ರೆಟ್ ರೂಮಿಗೆ ಹೋಗುವಂತೆ ಆಗಿದೆ. ಬಂದ ಮೊದಲ ವಾರವೇ ರಕ್ಷಿತಾ ಸೀಕ್ರೆಟ್ ರೂಮ್ ಸೇರಿದ್ದರು. ಈಗ ಅಣ್ಣನ ಜೊತೆಗೆ ಹೋಗಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now