ತುಮಕೂರು: ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರದಿಂದ ಸೋಲು ಕಂಡಿದ್ದ ವಿ ಸೋಮಣ್ಣ, ಲೋಕಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿ ಎಂದೇ ಹೇಳಲಾಗುತ್ತಿದೆ. ಅದರಲ್ಲೂ ತುಮಕೂರಿನಿಂದ ಸ್ಪರ್ಧೆಗೆ ಬಯಸುತ್ತಿದ್ದಾರೆ ಎಂದೇ ಹೇಳಲಾಗುತ್ತಿದೆ. ಅದಕ್ಕೆ ಪೂರಕವೆಂಬಂತೆ ತುಮಕೂರು ಕ್ಷೇತ್ರದಲ್ಲಿ ಹೆಚ್ಚು ಓಡಾಟ ನಡೆಸುತ್ತಿದ್ದಾರೆ. ಇಂದು ಕೂಡ ತುಮಕೂರು ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.
ರಾಜ್ಯಸಭಾ ಚುನಾವಣೆಗೂ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಕಡೆ ಗಳಿಗೆಯಲ್ಲಿ ಸೋಮಣ್ಣ ಅವರಿಗೆ ಟಿಕೆಟ್ ಮಿಸ್ ಆಗಿದೆ. ಈ ಬಗ್ಗೆ ಮಾತನಾಡಿದ ಅವರು, ನಾನು ರಾಜ್ಯಸಭೆಗೆ ಸ್ಪರ್ಧೆ ಮಾಡುತ್ತೇನೆ ಎಂದದ್ದು ನಿಜ. ರಾಜ್ಯಸಭೆಗೆ ಎಲ್ಲವೂ ಕೊನೆ ಹಂತಕ್ಕೆ ಬಂದಿತ್ತು. ಕೊನೆ ಕ್ಷಣದಲ್ಲಿ ಎಲ್ಲವೂ ಬದಲಾಗಿದೆ. ಒಳ್ಳೆ ಕಾರ್ಯಕರ್ತನಿಗೆ ಟಿಕೆಟ್ ನೀಡಿದ್ದಾರೆ. ಪರಿಸ್ಥಿತಿಯನ್ನು ಅವಲೋಕನ ಮಾಡಿದ್ದೇನೆ ಎಂದಿದ್ದಾರೆ.
ಇನ್ನು ಲೋಕಸಭಾ ಚುನಾವಣಾ ಟಿಕೆಟ್ ಬಗ್ಗೆ ಮಾತನಾಡಿ, ಲೋಕಸಭಾ ಚುನಾವಣೆಗೆವಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ. ಹೈಕಮಾಂಡ್ ಏನು ಹೇಳುತ್ತದೆ ಅದನ್ನು ಕೇಳುತ್ತೇನೆ. ಹೈಕಮಾಂಡ್ ಟಿಜೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ. ನಿಂತುಕೊಳ್ಳಬೇಕು ಅಂದರೆ ನಿಂತುಕೊಳ್ಳುತ್ತೇನೆ. ಮಾಧುಸ್ವಾಮಿ ನಮ್ಮ ಹಿರಿಯ ನಾಯಕರು. ನನಗಿಂತ ಬುದ್ದಿವಂತರಿದ್ದಾರೆ. ಹೋರಾಟದಿಂದ ಬಂದವರು. ಮಾಧುಸ್ವಾಮಿ ಅವರು ಹೇಳುವುದು ಸಹಜ. ಅದಕ್ಕೆ ನನ್ನ ಭಿನ್ನಾಭಿಪ್ರಾಯ ಏನು ಇಲ್ಲ. ಹೈಕಮಾಂಡ್ ಟಿಕೆಟ್ ನೀಡಿದರೆ ಖಂಡಿತ ಸ್ಪರ್ಧೆ ಮಾಡುತ್ತೇನೆ. ಇದು ಬಿಜೆಪಿ ಕ್ಷೇತ್ರ, ಇಲ್ಲಿ ಬಸವರಾಜು ಅವರು ಎಂ.ಪಿ ಇದ್ದಾರೆ. ವಯಸ್ಸಿನ ಕಾರಣ ಅವರು ಸ್ಪರ್ಧೆ ಮಾಡಲ್ಲ ಎಂದು ತಿರ್ಮಾನ ಮಾಡಿದ್ದಾರೆ. ನಾವು ಬಿಜೆಪಿ ಅವರು ನಮ್ಮ ಹಕ್ಕನ್ನು ಪ್ರತಿಪಾದಿಸುತ್ತೀವಿ. ಕ್ಷೇತ್ರ ಯಾರಿಗೆ ಹೋಗಬೇಕು ಎಂಬುದನ್ನ ತಿರ್ಮಾನ ಮಾಡುತ್ತೆ. ಈಗಾಗಲೇ ಎಲ್ಲವನ್ನು ಹೈಕಮಂಡ್ ತಿರ್ಮಾನ ಮಾಡಿದೆ. ನನಗೂ ತುಮಕೂರಿಗೂ ಅವಿನಾಭಾವ ಸಂಬಂಧ ಇದೆ. ಯಾರನ್ನ ಎಲ್ಲೇಲ್ಲಿ ಕರೆಸಿಕೊಳ್ಳಬೇಕು, ಎಲ್ಲೇಲ್ಲಿ ಕೆಲಸ ಮಾಡಿಸಿಕೊಳ್ಳಬೇಕು ಎನ್ನುವುದು ಭಗವಂತನ ನಿರ್ಣಯ ಎಂದಿದ್ದಾರೆ.