ಬೆಂಗಳೂರು: ಜೂನ್ 10ಕ್ಕೆ ರಾಜ್ಯಸಭಾ ಚುನಾವಣೆ ನಡೆಯಲಿದೆ. ಮೇ 31ಕ್ಕೆ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದೆ. ಆದರೂ ಕಾಂಗ್ರೆಸ್, ಬಿಜೆಪಿ ಪಕ್ಷಗಳು ಇನ್ನು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಲ್ಲ. ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಹೀಗಾಗಿ ಮೂರು ಪಕ್ಷಗಳಿಗೆ ಇದು ತಲೆನೋವಾಗಿ ಪರಿಣಮಿಸಿದೆ.
ಕಾಂಗ್ರೆಸ್ ಪಕ್ಷಕ್ಕೆ ಒಂದು ಸ್ಥಾನಕ್ಕೆ ಮಾತ್ರ ಸ್ಪರ್ಧಿಸಲು ಅವಕಾಶವಿದೆ. ಆ ಒಂದು ಸ್ಥಾನಕ್ಕೆ ಈಗಾಗಲೇ ಇರುವಂತ ಹಾಲಿ ಸದಸ್ಯ ಜೈರಾಮ್ ರಮೇಶ್ ಅವರನ್ನೇ ಕಣಕ್ಕಿಳಿಸಬೇಕೆಂಬ ಫ್ಲ್ಯಾನ್ ನಡೆಯುತ್ತಿದೆ ಎನ್ನಲಾಗಿದೆ. ಆದರೆ ಅದರ ಹಿಂದೆಯೂ ಮತ್ತಷ್ಟು ಆಕಾಂಕ್ಷಿಗಳಿರುವ ಕಾರಣ ತಕ್ಷಣ ಟಿಕೆಟ್ ಅನೌನ್ಸ್ ಮಾಡಿಲ್ಲ ಎನ್ನಲಾಗುತ್ತಿದೆ.
ಇನ್ನು ಬಿಜೆಪಿಗೆ ನಾಲ್ಕು ಸ್ಥಾನಗಳಲ್ಲಿ ನಿಲ್ಲುವ ಅವಕಾಶವಿದೆ. ಅದರಲ್ಲಿ ಎರಡು ಸ್ಥಾನ ಗೆದ್ದೆ ಗೆಲ್ಲುವ ಭರವಸೆಯೂ ಇದೆ. ನಿರ್ಮಲಾ ಸೀತರಾಮನ್ ಸೇರಿದಂತೆ ಡಜನ್ ಗಟ್ಟಲೆ ಆಕಾಂಕ್ಷೆಗಳು ಬಿಜೆಪಿಯಲ್ಲಿದ್ದಾರೆ. ಅದರಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಕೋರ್ ಕಮಿಟಿ ವರಿಷ್ಠರಿಗೆ ಕಳುಹಿಸಿದೆ. ಆ ಕಡೆಯಿಂದ ಯಾವ ಅಭ್ಯರ್ಥಿಗಳ ಫೈನಲ್ ಆಗುತ್ತೆ ಎಂಬುದು ಎಲ್ಲರ ಕುತೂಹಲವಾಗಿದೆ. ಜೊತೆಗೆ ಪರಿಷತ್ ನಲ್ಲಿ ಟಿಕೆಟ್ ತಪ್ಪಿದ್ದಕ್ಕೆ ಬೇಸರಗೊಂಡ ಆಕಾಂಕ್ಷಿಗಳು ಇದ್ದಾರೆ. ಒಂದು ವೇಳೆ ಅವರಿಗೆ ಟಿಕೆಟ್ ನೀಡಿ ಸಮಾಧಾನ ಮಾಡುವ ಫ್ಲ್ಯಾನ್ ಕೂಡ ಇರಬಹುದು. ಇನ್ನೂ ಜೆಡಿಎಸ್ ಜೊತೆ ಮಾತನಾಡಿ, ಅಭ್ಯರ್ಥಿ ಫೈನಲ್ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.