ಬೆಂಗಳೂರು: ಇಂದು ರಾಜ್ಯಸಭೆಗೆ ಚುನಾವಣೆ ನಡೆದಿದೆ. ಈ ಚುನಾವಣೆಯಲ್ಲಿ ತುಮಕೂರಿನ ಗುಬ್ಬಿ ಶಾಸಕ ಶ್ರೀನಿವಾಸ್ ಕೂಡ ಮತ ಚಲಾಯಿಸಿದ್ದಾರೆ. ಆದರೆ ಇವರ ಮತದಾನವನ್ನು ಮಾಜಿ ಸಿಎಂ ಕುಮಾರಸ್ವಾಮಿ ತಪ್ಪಾಗಿ ಅರ್ಥೈಸಿದ್ದಾರೆನ್ನಲಾಗಿದೆ. ಶ್ರೀನಿವಾಸ್ ಮತ ಚಲಾಯಿಸಿದ ಬಳಿಕ, ಅವರು ಖಾಲಿ ಪತ್ರ ಹಾಕಿದ್ದಾರೆಂದು ಹೇಳಿಕೆ ನೀಡಿದ್ದರು. ಆದರೆ ಈ ವಿಚಾರದ ಬಗ್ಗೆ ಮಾತನಾಡಿರುವ, ಗುಬ್ಬಿ ಶಾಸಕ ಶ್ರೀನಿವಾಸ್, ಸಂಜೆ ವೇಳೆಗೆ ಗೊತ್ತಾಗಲಿದೆ ಬಿಡಿ ಎಂದಿದ್ದಾರೆ.
ನಾನು ಮತ ಹಾಕಿ ರೇವಣ್ಣ ಅವರಿಗೆ ತೋರಿಸಿಯೇ ಬಂದಿದ್ದೀನಿ. ಖಾಲಿ ಮತ ಪತ್ರ ಇದ್ರೆ ಸಂಜೆಯೇ ಗೊತ್ತಾಗಲಿದೆ. ಒಂದು ವೇಳೆ ಖಾಲಿ ಪೇಪರ್ ಸಿಕ್ಕರೆ ನಾನೇ ಅದಕ್ಕೆ ಹೊಣೆಗಾರ. ಸಂಜೆ ವೇಳೆಗೆ ಫಲಿತಾಂಶ ಬರಲಿದೆ. ಆಗ ಗೊತ್ತಾಗಲಿದೆ. ಸಂಜೆ ವೇಳೆಗೆ ಯಾವ ರೀತಿಯ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದನ್ನು ನೋಡೋಣಾ.
ಅವರ ಸೊಸೆಯ ಸೀಮಂತಕ್ಕೆ ಹೋದಾಗಲೂ ಮಾತನಾಡಿಸಲಿಲ್ಲ. ಕಾರ್ಯಗಾರಕ್ಕೆ ಹೋದಾಗಲೂ ಮಾತನಾಡಿಸಲಿಲ್ಲ. ಕಳೆದ ಒಂದೂವರೆ ವರ್ಷದಿಂದ ಹೀಗೆಯೇ ಮಾಡ್ತಿದ್ದಾರೆ. ಅಸಮಾಧಾನ ಇರುವುದು ನಿಜ. ಆದರೆ ವೈಯಕ್ತಿಕವಾಗಿ ನಾನು ಎಲ್ಲಿಯೂ ಪಕ್ಷ ಬಿಡುತ್ತೇನೆಂದು ಹೇಳಿಲ್ಲ. ನಾನು ಮತ ಹಾಕಿರುವುದು ಸತ್ಯ, ಬ್ಲಾಂಕ್ ಪೇಪರ್ ಹಾಕಿರುವುದು ಸುಳ್ಳು ಎಂದಿದ್ದಾರೆ.