ಬೆಂಗಳೂರು: ಪೌರಾಯುಕ್ತೆಗೆ ಧಮ್ಕಿ ಹಾಕಿದ್ದ ರಾಜೀವ್ ಗೌಡ ಕೆಪಿಸಿಸಿಯಿಂದ ಬಿಗ್ ಶಾಕ್ ಎದುರಾಗಿದೆ. ಕೆಪಿಸಿಸಿಯಿಂದ ಅಮಾನತು ಮಾಡಲಾಗಿದೆ. ಕೆಪಿಸಿಸಿಯ ಶಿಸ್ತು ಪಾಲನಾ ಸಮಿತಿ ಈ ನಿರ್ಧಾರ ತೆಗೆದುಕೊಂಡಿದ್ದು, ಅಮಾನತು ಮಾಡಿ ಆದೇಶ ಹೊರಡಿಸಿದೆ. ಪೌರಾಯುಕ್ತೆಗೆ ಬೆದರಿಕೆ ಹಾಕಿದ್ದ ರಾಜೀವ್ ಗೌಡ, ಮಾತಿನಲ್ಲಿ ತೀರಾ ಕೆಟ್ಟದಾಗಿ ನಡೆದುಕೊಂಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀವ್ ಗೌಡಗೆ ಕೆಪಿಸಿಸಿ ನೋಟೀಸ್ ಕೂಡ ಜಾರಿ ಮಾಡಿತ್ತು. ಆ ಘಟನೆಯ ಬಗ್ಗೆ ಕಾರಣ ಕೇಳಿ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ನೋಟೀಸ್ ನೀಡಿದ್ದರು. ಏಳು ದಿನಗಳ ಒಳಗೆ ನೋಟೀಸ್ ಗೆ ಉತ್ತರ ನೀಡುವಂತೆ ಸೂಚನೆ ನೀಡಲಾಗಿತ್ತು. ಒಂದು ವೇಳೆ ಉತ್ತರ ನೀಡದೆ ಹೋದರೆ ಈ ಬಗ್ಗೆ ಶಿಸ್ತು ಸಮಿತಿಯು ಮುಂದಿನ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂದು ಜಿ.ಸಿ. ಚಂದ್ರಶೇಖರ್ ಎಚ್ಚರಿಕೆಯನ್ನು ನೀಡಿದ್ದರು. ಇದೀಗ ಕೆಪಿಸಿಸಿಯಿಂದ ರಾಜೀವ್ ಗೌಡ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಇಂದು ರಿಲೀಸ್ ಆಗಿರುವ ಕಲ್ಟ್ ಸಿನಿಮಾ ಬ್ಯಾನರ್ ಅನ್ನ ಅಲ್ಲಿನ ಪೌರಾಯುಕ್ತೆ ತೆರವುಗೊಳಿಸಿದ್ದರು. ಆಕ್ಸಿಡೆಂಟ್ ಆಗುತ್ತೆ ಎಂಬ ಕಾರಣಕ್ಕೆ. ಆದರೆ ರಾಜೀವ್ ಗೌಡ ಕರೆ ಮಾಡಿ, ಬಾಯಿಗೆ ಬಂದಂಗೆ ಕೆಟ್ಟದಾಗಿ ಮಾತನ್ನಾಡಿದ್ದರು. ಈ ಆಡಿಯೋ ವೈರಲ್ ಆಗುತ್ತಿದ್ದಂತೆ ಎಫ್ಐಆರ್ ಕೂಡ ದಾಖಲಾಗಿತ್ತು. ಆದರೆ ಅಂದಿನಿಂದ ರಾಜೀವ್ ಗೌಡ ಫೋನ್ ಕೂಡ ಸ್ವಿಚ್ಡ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಪೊಲೀಸರ ಕೈಗೂ ಸಿಕ್ತಾ ಇಲ್ಲ. ಇದೀಗ ಕೆಪಿಸಿಸಿಯಿಂದಾನು ಅಮಾನತುಗೊಂಡಿದ್ದಾರೆ. ರಾಜಕೀಯ ಭವಿಷ್ಯದಲ್ಲಿ ಬೆಳೆಯಬೇಕು ಎಂದುಕೊಂಡವರೇ ಅಧಿಕಾರಿಗಳ ಬಗ್ಗೆ ಇಷ್ಟು ಕೆಟ್ಟದಾಗಿ ಮಾತನ್ನಾಡುವುದು ಅವರ ಏಳ್ಗೆಗೂ ಶೋಭೆ ತರಲ್ಲ ಅಂತಾನೇ ಸ್ಥಳೀಯರು ಅಭಿಪ್ರಾಯವಾಗಿದೆ.






