Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜೀವ್ ಗೌಡ ಸೌಮ್ಯ ಸ್ವಭಾವದ ವ್ಯಕ್ತಿ : ಸಚಿವ ಕೆ.ಹೆಚ್.ಮುನಿಯಪ್ಪ

---Advertisement---

ಬೆಂಗಳೂರು: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ರಾಜೀವ್ ಗೌಡ ತೀರಾ ಕೆಟ್ಟದಾಗಿ ನಿಂದಿಸಿದ ಆಡಿಯೋ ವೈರಲ್ ಆಗುತ್ತಿದ್ದಂತೆ, ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ರಾಜೀವ್ ಗೌಡ ವಿರುದ್ಧ ಆಕ್ರೋಶ ಕೇಳಿ ಬರುತ್ತಿದೆ. ಈ ಬೆನ್ನಲ್ಲೇ ಸಚಿವ ಕೆ.ಹೆಚ್. ಮುನಿಯಪ್ಪ ಅವರ ರಾಜೀವ್ ಗೌಡ ಪರವಾಗಿ ಧ್ವನಿ ಎತ್ತಿದ್ದಾರೆ. ರಾಜೀವ್ ಗೌಡ ತುಂಬಾ ಸೌಮ್ಯ ಸ್ವಭಾವದ ವ್ಯಕ್ತಿ ಎಂದಿದ್ದಾರೆ.

ರಾಜೀವ್ ಗೌಡ ಅವರು ಸೌಮ್ಯ ಸ್ವಭಾವದವರು. ಸುಮಾರು 10 ವರ್ಷಗಳಿಂದ ಇದಾರೆ. ಇಷ್ಟು ಎಮೋಷನಲ್ ಆಗಬಾರದಿತ್ತು. ಒಬ್ಬ ರಾಜಕೀಯ ವ್ಯಕ್ತಿ ಶಾಂತಿಯಿಂದ ಇರಬೇಕು. ಅಧಿಕಾರಿಗಳಿಗೆ ಆ ರೀತಿ ಮಾತನ್ನಾಡಿದ್ದು ಸರಿ ಇಲ್ಲ ಅಂತ ನಾನು ಕೂಡ ಹೇಳುತ್ತೇನೆ. ಏನೇ ವ್ಯತ್ಯಾಸಗಳಿದ್ದರು ಸಹ ಕೂತು ಕೂಲಂಕುಶವಾಗಿ ಬಗೆಹರಿಸಿಕೊಳ್ಳಬೇಕು. ದಳದವರು ಈ ಹಿಂದೆ ಪ್ರೋಗ್ರಾಂ ಆದಾಗ ಎಲ್ಲಾ ಬ್ಯಾನರ್, ಪೋಸ್ಟರ್ಸ್ ಹಾಕಿದ್ದರು. ಅದನ್ನ ಪಾಲಿಕೆ ಅವರು ತೆಗೆದಿಲ್ಲ. ನಮ್ಮದಾಗಿದ್ದಕ್ಕೆ ತೆಗೆದು ಬಿಟ್ಟರು ಎಂಬುದು ಅವರ ವಾದ.

ಆ ಸಮಸ್ಯೆ ಇದ್ದರು ಕೂಡ ನೇರವಾಗಿ ಮಾತನ್ನಾಡಿ ಪರಿಹಾರ ಕಂಡುಕೊಳ್ಳಬೇಕಿತ್ತು. ಈ ರೀತಿ ಅವಹೇಳನವಾಗಿ ಯಾರಿಗೂ ಸಹ ಮಾತನ್ನಾಡಬಾರದು. ಅದು ಅನಾಗರಿಕತೆ ಆಗುತ್ತೆ. ಸುಸಂಸ್ಕೃತರಾದವರು ಆ ರೀತಿ ಮಾತನ್ನಾಡಬಾರದು. ನನಗೆ ಸಿಕ್ಕಿದರೆ ಬುದ್ದಿ ಹೇಳ್ತೇನೆ. ಈಗಾಗಲೇ ಅವರು ಕ್ಷಮೆ ಕೂಡ ಕೇಳಿದ್ದಾರೆ. ಜನಪ್ರತಿನಿಧಿಯಾಗುವಂತ ವ್ಯಕ್ತಿ ಒಳ್ಳೆ ಗುಣ, ನಡತೆಯನ್ನು ಬೆಳೆಸಿಕೊಳ್ಳಬೇಕು. ಆ ಭಾಷೆ ಸರಿಯಿಲ್ಲ. ಇಷ್ಟು ದಿನದಲ್ಲಿ ಒಂದು ದಿನ ಕೂಡ ಈ ರೀತಿಯ ಭಾಷೆಯನ್ನು ಆಡಿರಲಿಲ್ಲ. ಎರಡು ಜಿಲ್ಲೆಯಲ್ಲೂ ಅತಿ ಹೆಚ್ಚು ಕೆಲಸ ಮಾಡುತ್ತಿದ್ದಾರೆ ಎಂಬ ಮಾತನ್ನೇ ಹೇಳಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now