Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ರಾಜೀವ್ ಗಾಂಧಿ ವಸತಿ ಯೋಜನೆ : ಬಾಯಿ ಬಿಟ್ರೆ ಸರ್ಕಾರ ಅಲ್ಲಾಡುತ್ತೆ ಎಂದ ಕಾಂಗ್ರೆಸ್ ಶಾಸಕ..!

---Advertisement---

ಕಲಬುರಗಿ: ತಮ್ಮದೇ ಪಕ್ಷದ ವಿರುದ್ಧ ಶಾಸಕ ಬಿ.ಆರ್.ಪಾಟೀಲ್ ಆಕ್ರೋಶ ಹೊರ ಹಾಕಿದ್ದಾರೆ. ತನಗೆ ಗೊತ್ತಿರುವ ಸತ್ಯವನ್ನ ಹೇಳಿದ್ರೆ ಸರ್ಕಾರವೇ ಅಲ್ಲಾಡುತ್ತೆ ಎನ್ನುವ ಮಾತನ್ನಾಡಿದ್ದಾರೆ. ಅದು ರಾಜೀವ್ ಗಾಂಧಿ ವಸತಿ ಯೋಜನೆಯ ವಿಚಾರಕ್ಕೆ. ಹಾಗಾದ್ರೆ ಬಿ.ಆರ್.ಪಾಟೀಲ್ ಹೇಳಿದ್ದೇನು ಅನ್ನೋದನ್ನ ಮುಂದೆ ಓದಿ.

ಕಾಂಗ್ರೆಸ್ ಸರ್ಕಾರದ ವಿರುದ್ಧ ಹೊಸದೊಂದು ಬಾಂವ್ ಹಾಕಿದ ಶಾಸಕ ಪಾಟೀಲ್ ಅವರು, ಹಣ ನೀಡಿದವರಿಗಷ್ಟೇ ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ಮನೆಗಳು ಮಂಜೂರಾಗುತ್ತಿವೆ ಎಂದು ಆರೋಪಿಸಿರುವ ಆಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ಇದೆ. ಈ ಆಡಿಯೋ ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತರಾದ ಸರ್ಫರಾಜ್ ಖಾನ್ ಜೊತೆಗೆ ಬಿ.ಆರ್.ಪಾಟೀಲ್ ಅವರು ಮಾತನಾಡಿದ್ದಾರೆ ಎನ್ಮಲಾಗಿದೆ.

 

ಆಡಿಯೋದಲ್ಲಿ, ನಮ್ಮ ಸರ್ಕಾರವನ್ನು ದೂರುವುದಕ್ಕೆ ನಮಗೆ ಬೇಸರವಾಗುತ್ತಿದೆ. ಹಣ ನೀಡಿದವರಿಗಷ್ಟೇ ವಸತಿ ನೀಡಲಾಗುತ್ತಿದೆ. ನೀವೂ ತಪ್ಪು ತಿಳಿಯಬೇಡೊ. ಆಶ್ಚರ್ಯ ವಿಚಾರ ಇದೆ. ರಾಜೀವ್ ಗಾಂಧಿ ನಿಗಮದಲ್ಲಿ ಯಾರೂ ದುಡ್ಡು ಕೊಡ್ತಾರೆ ಅವರಿಗೆ ಮನೆ ನೀಡಲಾಗುತ್ತಿದೆ. ಇದು ದಂಧೆ ಆಗ್ತಾ ಇದೆಯಾ..? ನಾನು ನನ್ನ ಸರ್ಕಾರದ ಪರ ಹೇಗೆ ಆರೋಪ ಮಾಡ್ತೀನಿ..? ನನ್ನ ಮಾಹಿತಿ ಪ್ರಕಾರ ಯಾರು ದುಡ್ಡು ಕೊಡ್ತಾರೆ ಅವರಿಗೆ ಮನೆಗಳು ಸಿಗುತ್ತಿವೆ. ನಾನು ಯಾರಿಗೂ ಹೇಳಿಲ್ಲ. ನಾನು ಕೊಟ್ಟಿರುವ ಲೆಟರ್ ಗೆ ಮನೆಗಳನ್ನು ಕೊಟ್ಟಿಲ್ಲ. ಅದೇ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ನಾನು ಕೊಟ್ಟಿರುವ ಲೆಟರ್ ಗೆ ಹಣ ಕೊಟ್ಟಿರುವ ಮನೆಗಳನ್ನು ತೆಗೆದುಕೊಂಡು ಬಂದಿದ್ದಾರೆ. ಹೀಗಾದ್ರೆ ನನ್ನ ಮರ್ಯಾದೆ ಹೇಗಿರುತ್ತೆ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸರ್ಫರಾಜ್ ಖಾ‌ನ್ ಹಾಗೆಲ್ಲಾ ಏನಿಲ್ಲ, ಇದ್ದರೆ ಹೇಳಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಸದ್ಯ ಆಡಿಯೋ ಎಲ್ಲೆಡೆ ವೈರಲ್ ಆಗಿದ್ದು, ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ಅವ್ಯವಹಾರ ನಡೆಯುತ್ತಾ ಇದೆಯಾ ಎಂಬ ಪ್ರಶ್ನೆ ಎದುರಾಗಿದೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment