ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮೇ. 06 : ಹೊಸದುರ್ಗ ತಾಲ್ಲೂಕಿನ ಜಾನಕಲ್ನಿಂದ ಮೇ.9 ರಂದು ಬೆಳಿಗ್ಗೆ 9 ಗಂಟೆಗೆ ರಾಜಾವೀರ ಮದಕರಿನಾಯಕರ ಸ್ಮಾರಕ ನಿರ್ಮಾಣ ವೇದಿಕೆಯಿಂದ ರಥಯಾತ್ರೆ ಹೊರಡಲಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚಿತ್ರದುರ್ಗದಲ್ಲಿ ಅನೇಕ ಪಾಳೆಯಗಾರರು ಆಳ್ವಿಕೆ ನಡೆಸಿದ್ದಾರೆ. ರಾಜಾವೀರ ಮದಕರಿನಾಯಕರ ಇತಿಹಾಸವನ್ನು ಬೆಳಕಿಗೆ ತರಬೇಕಿದೆ. ಅನೇಕ ತಾರತಮ್ಯಗಳು ನಡೆಯುತ್ತಿವೆ. ಎಲ್ಲವನ್ನು ಹೋಗಲಾಡಿಸಿ ಶ್ರೀರಂಗಪಟ್ಟಣದಲ್ಲಿ ರಾಜಾವೀರ ಮದಕರಿನಾಯಕರ ಸ್ಮಾರಕವಾಗಬೇಕೆಂಬುದು ನಮ್ಮ ಉದ್ದೇಶ ಎಂದರು.
ಜಾನಕಲ್ನಿಂದ ಹೊರಡುವ ರಥಯಾತ್ರೆ ಹೊಸದುರ್ಗ, ಹೊಳಲ್ಕೆರೆ, ಚಿತ್ರದುರ್ಗ, ಚಳ್ಳಕೆರೆ, ನಾಯಕನಹಟ್ಟಿ, ಮೊಳಕಾಲ್ಮುರು, ಹಿರಿಯೂರು ಸಿರಾ ಮೂಲಕ ಮೇ.15 ರಂದು ಶ್ರೀರಂಗಪಟ್ಟಣ ತಲುಪಲಿದೆ. ರಾಜಾವೀರ ಮದಕರಿನಾಯಕರ ವಂಶಸ್ಥರ ಸಮಾಧಿಗಳು ಬಹಳಷ್ಟಿದೆ. ಅವೆಲ್ಲವೂ ಜೀರ್ಣೊದ್ದಾರವಾಗಬೇಕು. ಹಂಪಿ ಮಾದರಿಯಲ್ಲಿ ಪ್ರತಿ ವರ್ಷವೂ ಚಿತ್ರದುರ್ಗದಲ್ಲಿ ದುರ್ಗೋತ್ಸವ ಆಚರಣೆಯಾಗಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ರಾಜಾವೀರ ಮದಕರಿನಾಯಕರು ಯಾವುದೇ ಒಂದು ಜನಾಂಗಕ್ಕೆ ಸೀಮಿತವಲ್ಲ. ಚಿತ್ರದುರ್ಗದ ಕೋಟೆಯನ್ನು ಆಳಿದ್ದಾರೆ. ಹಾಗಾಗಿ ಅವರ ಇತಿಹಾಸದ ಮೇಲೆ ಬೆಳಕು ಚೆಲ್ಲಲು ರಥಯಾತ್ರೆಯನ್ನು ಆರಂಭಿಸಿದ್ದೇವೆ. ಮೇ.15 ರಂದು ಶ್ರೀರಂಗಪಟ್ಟಣದಲ್ಲಿ ಪುಣ್ಯಸ್ಮರಣೆ ಆಚರಿಸಲಾಗುವುದೆಂದರು.
ನಗರಸಭೆ ಮಾಜಿ ಸದಸ್ಯ ತಿಪ್ಪೇಸ್ವಾಮಿ, ಸೋಮೇಂದ್ರ ಇವರುಗಳು ಮಾತನಾಡಿ ರಾಜಾವೀರ ಮದಕರಿನಾಯಕರ ಸ್ಮಾರಕ ನಿರ್ಮಾಣ ವೇದಿಕೆಯಿಂದ ಹೊರಟಿರುವ
ರಥಯಾತ್ರೆಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಶ್ರೀರಂಗಪಟ್ಟಣದಲ್ಲಿ ರಾಜಾವೀರಮದಕರಿನಾಯಕರ ಸ್ಮಾರಕವಾಗಬೇಕು. ಆಗ ಮಾತ್ರ ಪಾಳೆಯಗಾರರಿಗೆ ನಿಜವಾದ ಗೌರವ ಸಿಕ್ಕಂತಾಗುತ್ತದೆ ಎಂದು ನುಡಿದರು.
ಶಶಿಕುಮಾರ್, ಅಜಯ್ಕುಮಾರ್, ಅಣ್ಣಪ್ಪ, ನಾಗಭೂಷಣ್ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.






