Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಕ್ಟೋಬರ್ 13 ರಂದು ನಾಡದೊರೆ  ರಾಜವೀರ ಮದಕರಿನಾಯಕರ ಜಯಂತ್ಯೋತ್ಸವ : ಎಲ್ಲಾ ಸಮಾಜದವರು ಭಾಗವಹಿಸಿ : ಬಿ.ಕಾಂತರಾಜ್

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.11 : ನಾಡದೊರೆ  ರಾಜವೀರ ಮದಕರಿನಾಯಕ ಜಯಂತ್ಯೋತ್ಸವವನ್ನು ಶುಕ್ರವಾರ ಹಮ್ಮಿಕೊಂಡಿದ್ದು ನಮ್ಮ ಸಮಾಜದ ಬಂಧುಗಳು ಸೇರಿ ಎಲ್ಲಾ ಸಮಾಜದ ಬಂಧುಗಳು ಆಗಮಿಸುವ ಮೂಲಕ‌ ಯಶಸ್ವಿಗೊಳಿಸಿ ಎಂದು ನಾಯಕ ಸಮಾಜದ ತಾಲೂಕು ಅಧ್ಯಕ್ಷ ಬಿ.ಕಾಂತರಾಜ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಮದಕರಿ ನಾಯಕ ಜಯಂತ್ಯೋತ್ಸವ ಅಂಗವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಚಿತ್ರದುರ್ಗ ಆಳ್ವಿಕೆ ಮೂಲಕ‌ ಸಮಾಜದ ಸುಧಾರಣೆ ಮೂಲಕ‌ ಎಲ್ಲಾ ಸಮಾಜದ. ಹಿತ ಕಾಯುವ ಕೆಲಸ ಮದಕರಿನಾಯಕರು ಮಾಡಿದ್ದಾರೆ. ನಮ್ಮ ನಾಡದೊರೆ ರಾಜವೀರ ಮದಕರಿನಾಯಕ  ಮದಕರಿ ಉತ್ಸವವನ್ನು ಇದೇ  13 ರಂದು ಶುಕ್ರವಾರದಂದು ಕನಕ‌ ವೃತ್ತದಿಂದ 3 ಗಂಟೆಗೆ  ಅದ್ದೂರಿಯಾಗಿ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು ಜಿಲ್ಲೆಯ ಮತ್ತು ನಾಡಿನ ಎಲ್ಲಾ ಸಮಾಜದ ಬಂಧುಗಳು ಭಾಗವಹಿಸಲು ಮನವಿ ಮಾಡುತ್ತೇನೆ. ಮದಕರಿ ನಾಯಕರು ನಾಯಕ‌ ಸಮಾಜಕ್ಕೆ ಮಾತ್ರ ಸೀಮಿತವಲ್ಲ ಎಲ್ಲಾ ಸಮಾಜದವರು ಸಹ ಮೆರವಣಿಗೆಯಲ್ಲಿ ಭಾಗವಹಿಸಿ ಎಂದರು. ಎಲ್ಲಾ ಸಮಾಜದವರಿಗೆ ಮಾಧ್ಯಮದ ಮೂಲಕ ಭಾಗವಹಿಸಲು ಕರೆ ನೀಡಿದ್ದು  ಮುಖಂಡರು ಅಷ್ಟೆ ಅಲ್ಲದೇ ಆ ಸಮಾಜದ ಬಾಂಧವರನ್ನು  ಕರೆ ತಂದು ಯಶಸ್ವಿಗೊಳಿಸಿದರೆ ಮದಕರಿನಾಯಕರ ಮೇಲಿನ ಅಭಿಮಾನ ಹಿಮ್ಮಡಿಗೊಳ್ಳತ್ತದೆ.

ನಮ್ಮನ್ನ ಕರೆಯಬೇಕಿತ್ತು ಎಂದು ಕೆಲವರು ಮಾಧ್ಯಮದರ ಮುಂದೆ ತಿಳಿಸಿದ್ದಾರೆ ಎಂದು ತಿಳಿದಿದ್ದು ಮದಕರಿನಾಯಕರು ಜಯಂತಿಗೆ ಎಲ್ಲಾರಿಗೂ ಆಹ್ವಾನವಿದೆ.ಈ ಮೊದಲು ಮಾಡಿದ ಸುದ್ದಿಗೋಷ್ಠಿಯಲ್ಲಿ ನಾನು ತಿಳಿಸಿದ್ದೆ ಎಲ್ಲಾ ಸಮಾಜಕ್ಕೂ ಮದಕರಿನಾಯಕ ಕೊಡುಗೆ ಇದೆ ಎಲ್ಲಾರೂ ಭಾಗವಹಿಸಿ ಎಂದು ಮನವಿ ಮಾಡಿದ್ದೆ  ಈಗ ನಮ್ಮನ್ನ ಕರೆದಿಲ್ಲ ಎಂಬುದು ಸರಿಯಲ್ಲ. ಇದು ನಮ್ಮ ಮನೆ ಕಾರ್ಯಕ್ರಮವಲ್ಲ ಎಂದು ಮುಖಂಡರಿಗೆ   ಟಾಂಗ್   ನೀಡಿದರು.

ರಾಜವೀರ  ಮದಕರಿನಾಯಕರನ್ನು  ವರ್ಷದಲ್ಲಿ ಮೂರು ಬಾರಿ ಕಾರ್ಯಕ್ರಮವನ್ನು  ಮಾಡಲಾಗುತ್ತದೆ. ಪಟ್ಟಕ್ಕೆ ಹೇರಿದ ದಿನ, ಮದಕರಿನಾಯಕ ಸ್ಮರಣೋತ್ಸವ, ಮದಕರಿ ಉತ್ಸವ ಎಂಬ ಹೆಸರಿನಲ್ಲಿ ಪ್ರತಿ ವರ್ಷ ಕಾರ್ಯಕ್ರಮ‌ ಮಾಡಲಾಗುತ್ತದೆ ಎಂದರು‌.

ಮೆರವಣಿಗೆಯನ್ನು  ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಉದ್ಘಾಟನೆ ಮಾಡುವರು, ಶಾಸಕರಾದ ಟಿ.ರಘುಮೂರ್ತಿ, ಗೋಪಾಲಕೃಷ್ಣ, ಗೋವಿಂದಪ್ಪ, ಕೆ.ಸಿ.ವೀರೇಂದ್ರ ಪಪ್ಪಿ, ಚಂದ್ರಪ್ಪ, ಕೇಂದ್ರ ಸಚಿವರಾದ ನಾರಾಯಣಸ್ವಾಮಿ ಭಾಗವಹಿಸುವರು.

ಮದಕರಿನಾಯಕ ಪ್ರತಿಮೆಯನ್ನು  ಹೂ ಮತ್ತು ಲೈಟ್ ಗಳ ಮೂಲಕ ವಿಶೇಷವಾಗಿ ಅಲಂಕಾರ ಮಾಡಲಾಗಿರುತ್ತದೆ. ಎಲ್ಲಾ ಪುತ್ಥಳಿಗಳನ್ನು ಸಹ ಅಲಂಕಾರ ಮಾಡಲಾಗಿರುತ್ತದೆ. ಯುವ ಸಮೂಹಕ್ಕೆ‌ ತಕ್ಕಂತೆ  ಮೆರವಣಿಗೆ ಮಾಡಲಾಗುತ್ತಿದ್ದು ನಿಮ್ಮ ಮನೆ ಕಾರ್ಯಕ್ರಮದಂತೆ ಭಾಗವಹಿಸೋಣ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ  ನೂತನ  ಮದಕರಿ ನಾಯಕರ  ಭಾವಚಿತ್ರ ಬಿಡುಗಡೆಗೊಳಿಸಿದರು.
ನಾಯಕ ಸಮಾಜದ ಜಿಲ್ಲಾ ಅಧ್ಯಕ್ಷ ಹೆಚ್.ಜೆ. ಕೃಷ್ಣಮೂರ್ತಿ, ಗೋಪಾಲಸ್ವಾಮಿ ನಾಯಕ್, ಕಾಟೀಹಳ್ಳಿ ಕರಿಯಪ್ಪ,  ಸೋಮೇಂದ್ರ,  ಕೇಶವಮೂರ್ತಿ ಇದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment