ಬೆಂಗಳೂರು; ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಹಾಗೂ ವಿನಯ್ ಗೌಡ ನಿನ್ನೆಯಷ್ಟೇ ಪೊಲೀಸರ ವಶದಲ್ಲಿದ್ದರು. ಬಳಿಕ ರಾತ್ರಿಯೇ ಅವರನ್ನು ಬಿಟ್ಟು ಕಳುಹಿಸಿ, ಬೆಳಗ್ಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು. ಇದೀಗ ಮತ್ತೆ ಪೊಲೀಸರು ಮತ್ತೆ ಬಂಧಿಸಿದ್ದಾರೆ.

ರಜತ್ ಹಾಗೂ ವಿನಯ್ ಗೌಡ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಒಂದನ್ನ ಶೇರ್ ಮಾಡಿದ್ದರು. ಲಾಂಗ್ ಹಿಡಿದು ಸ್ಟೈಲ್ ಆಗಿ ವಾಕ್ ಮಾಡುತ್ತಾ, ಪೋಸ್ ನೀಡಿದ್ದರು. ಹೀಗಾಗಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು, ವುಚಾರಣೆ ನಡೆಸಿ, ಬಿಟ್ಟು ಕಳುಹಿಸಿದ್ದರು. ಆದರೆ ಸೋಷಿಯಲ್ ಮೀಡಿಯಾದಲ್ಲಿ ರಜತ್ ಕಿಶನ್ ಹಾಗೂ ವಿನಯ್ ಗೌಡ ಪೊಲೀಸ್ ತನಿಖೆಯಲ್ಲಿ ನೀಡಿರುವ ಮಚ್ಚು ಬೇರೆಯಾಗಿತ್ತು, ರೀಲ್ಸ್ ನಲ್ಲಿ ತೋರಿಸಿರುವ ಮಚ್ಚು ಬೇರೆಯಾಗಿತ್ತು ಎಂಬ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಪೊಲೀಸರು ಇಬ್ಬರನ್ನು ಮತ್ತೆ ಅರೆಸ್ಟ್ ಮಾಡಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ನಕಲಿ ಲಾಂಗ್ ನೀಡಿರುವುದು ಬೆಳಕಿಗೆ ಬಂದಿತ್ತು. ಅಸಲಿ ಲಾಂಗ್ ಅಕ್ಷಯ ಸ್ಟುಡಿಯೋದಲ್ಲಿ ಇದೆ ಎಂಬ ಹೇಳಿಕೆ ನೀಡಿದ್ದರಿಂದ ಪೊಲೀಸರು ಇಬ್ಬರನ್ನು ಅಕ್ಷಯ ಸ್ಟುಡಿಯೋಗೆ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದ್ದಾರೆ. ತನಿಖೆಯಲ್ಲಿ ಸಾಕ್ಷ್ಯ ನಾಶ ಮಾಡುವ ಹಿನ್ನೆಲೆ ವಿನಯ್ ಹಾಗೂ ರಜತ್ ಅವರನ್ನು ಮತ್ತೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈಗ ಪೊಲೀಸರು ಆರೋಪಿಗಳನ್ನು ನೇರವಾಗಿ ಕೋರ್ಟ್ ಗೆ ಹಾಜರು ಪಡಿಸುತ್ತಾರೆ. ಒರಿಜಿನಲ್ ಲಾಂಗ್ ಸಿಗದೆ ಹೋದಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಿಗೆ ಸಂಕಷ್ಟ ತಪ್ಪಿದ್ದಲ್ಲ. ಮೊದಲೇ ಪೊಲೀಸರಿಗೆ ನಿಜವಾದ ಲಾಂಗ್ ಕೊಡದೆ ಯಾಮಾರಿಸಿದ್ದಾರೆ.


