ರಾಜಸ್ಥಾನ ಎಕ್ಸಿಟ್ ಪೋಲ್ಸ್ : ಈ ಬಾರಿ ಅಧಿಕಾರ ಯಾರದ್ದು?

ಸುದ್ದಿಒನ್ : ನವದೆಹಲಿ/ ಜೈಪುರ :  ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ 2023 ರ ಮತದಾನ ಮುಗಿದಿದ್ದು, ಎಕ್ಸಿಟ್ ಪೋಲ್ ಫಲಿತಾಂಶಗಳು ಹೊರಬಿದ್ದಿವೆ.

ವಿವಿಧ ಏಜೆನ್ಸಿಗಳು ಫಲಿತಾಂಶಗಳನ್ನು ಪ್ರಕಟಿಸಿವೆ.

ಐದು ರಾಜ್ಯಗಳ ಚುನಾವಣಾ ಫಲಿತಾಂಶಗಳು ಡಿಸೆಂಬರ್ 3 ರಂದು ಬಿಡುಗಡೆಯಾಗಲಿವೆ. ಈ ಹಿನ್ನಲೆಯಲ್ಲಿ ಸಮೀಕ್ಷೆಗಳು ಚುನಾವಣಾ ಫಲಿತಾಂಶದ ವಿವರಗಳನ್ನು ಬಹಿರಂಗಪಡಿಸುತ್ತಿವೆ.
ರಾಜಸ್ಥಾನದಲ್ಲಿ 199 ವಿಧಾನಸಭಾ ಸ್ಥಾನಗಳಿದ್ದು, ಮ್ಯಾಜಿಕ್ ಸಂಖ್ಯೆ 100ರ ಗಡಿ ದಾಟಿದರೆ ಸರ್ಕಾರ ರಚಿಸಬಹುದು.

ಆದರೆ, ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಿಸುವ ಸಂಪ್ರದಾಯ ರಾಜಸ್ಥಾನದಲ್ಲಿ ಮುಂದುವರಿದಿದೆ. ಇದರೊಂದಿಗೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಕೇಸರಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬಲವಾಗಿ ನಂಬಿದ್ದಾರೆ. ಮತ್ತೊಂದೆಡೆ ಆಡಳಿತಾರೂಢ ಕಾಂಗ್ರೆಸ್ ಗೆ ಮತ್ತೆ ಅಧಿಕಾರ ದಕ್ಕಲಿದೆ ಎನ್ನಲಾಗುತ್ತಿದೆ. ಇದರೊಂದಿಗೆ ಚುನಾವಣಾ ಫಲಿತಾಂಶ ತೀವ್ರ ಕುತೂಹಲ ಮೂಡಿಸಿವೆ.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಎಕ್ಸಿಟ್ ಪೋಲ್‌ಗಳ ಬಗ್ಗೆ ಆಸಕ್ತಿದಾಯಕ ಹೇಳಿಕೆಯನ್ನು ನೀಡಿದ್ದಾರೆ. ನಮಗೆ ಎಕ್ಸಿಟ್ ಪೋಲ್ ಗಳು ಅನಗತ್ಯ. ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ರಾಜ್ಯದಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆ ಇಲ್ಲ. ರಾಜಸ್ಥಾನ ಸೇರಿದಂತೆ ಐದು ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳಿದ್ದರು.

ಎಕ್ಸಿಟ್ ಪೋಲ್‌ಗಳ ವಿವರಗಳು ಹೀಗಿವೆ..

ಪೀಪಲ್ಸ್ ಪಲ್ಸ್ ಸಮೀಕ್ಷೆ..
ಬಿಜೆಪಿ.. 95-115
ಕಾಂಗ್ರೆಸ್.. 73-95
ಇತರೆ.. 8-11.

ಇಂಡಿಯಾ ಟುಡೇ..
ಬಿಜೆಪಿ.. 55-72
ಕಾಂಗ್ರೆಸ್.. 119-141
ಇತರೆ.. 4-11

ನ್ಯೂಸ್ ನೇಷನ್ಸ್
ಬಿಜೆಪಿ.. 89-93
ಕಾಂಗ್ರೆಸ್.. 99-103
ಇತರೆ.. 05-09

ನ್ಯೂಸ್18..
ಬಿಜೆಪಿ.. 111
ಕಾಂಗ್ರೆಸ್.. 74
ಇತರೆ.. 14

ರಿಪಬ್ಲಿಕ್ ಟಿವಿ..
ಬಿಜೆಪಿ.. 118-130
ಕಾಂಗ್ರೆಸ್.. 97-107
ಇತರೆ.. 0-2.

ಜನ್ ಕಿ ಬಾತ್
ಬಿಜೆಪಿ.. 100-122
ಕಾಂಗ್ರೆಸ್.. 62-85
ಇತರೆ.. 14-15.

ಟಿವಿ9 ಭಾರರ್ವರ್ಷ್ ಪೋಲ್ಸ್ಟ್ರಾಟ್..
ಬಿಜೆಪಿ.. 100-120
ಕಾಂಗ್ರೆಸ್.. 90-100.

ಟೈಮ್ಸ್ ನೌ-ಇಟಿಜಿ
ಬಿಜೆಪಿ.. 108-128
ಕಾಂಗ್ರೆಸ್.. 56-72.

Share This Article
Leave a Comment

Leave a Reply

Your email address will not be published. Required fields are marked *