ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ಭರ್ಜರಿ ಜಯಗಳಿಸಿದ ಮೇಲೆ ಕಾಂಗ್ರೆಸ್ ನಲ್ಲಿ ಸಿಎಂ ಹುದ್ದೆಗಾಗಿ ಕಿತ್ತಾಟ ಶುರುವಾಗಿತ್ತು. ಆದರೆ ಹೈಕಮಾಂಡ್ ಹೇಗೋ ಸಮಾಧಾನ ಮಾಡಿ, ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಿದರು, ಡಿಕೆ ಶಿವಕುಮಾರ್ ಅವರನ್ನು ಡಿಸಿಎಂ ಸ್ಥಾನಕ್ಕೆ ಒಪ್ಪಿಸಿದರು. ಆದರೆ ಮೂಲಗಳ ಪ್ರಕಾರ ಎರಡು ವರ್ಷಗಳ ಬಳಿಕ ಡಿಕೆ ಶಿವಕುಮಾರ್ ಅವರನ್ನೇ ಸಿಎಂ ಮಾಡುವುದಾಗಿ ಹೈಕಮಾಂಡ್ ಹೇಳಿದೆ ಎನ್ನಲಾಗಿದೆ. ಅದಕ್ಕೋಸ್ಕರ ಡಿಕೆ ಶಿವಕುಮಾರ್ ಅವರ ಬೆಂಬಲಿಗರು ಸುಮ್ಮನೆ ಆಗಿದ್ದಾರೆ. ಆದರೆ ಇದೀಗ ಸಚಿವ ಕೆ ಎನ್ ರಾಜಣ್ಣ ಡಿಕೆಶಿ ಬೆಂಬಲಿಗರನ್ನು ಕೆಣಕುವಂತ ಹೇಳಿಕೆ ನೀಡಿದ್ದಾರೆ.
‘ಸಿದ್ದರಾಮಯ್ಯ ಅವರೇ ಇನ್ನು ಐದು ವರ್ಷಗಳ ಕಾಲ ಸಿಎಂ ಆಗಿರಬೇಕು. ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಅವರೇ ಸಿಎಂ ಆಗಬೇಕು. ಅನ್ನಭಾಗ್ಯ ಯೋಜನೆಯನ್ನು ಯಾವೊಬ್ಬ ನಾಯಕನು ಮಾಡಲಿಲ್ಲ. ಬೇರೆ ನಾಯಕರಲ್ಲಿ ಕಾಣದ ದೂರ ದೃಷ್ಟಿ ಸಿದ್ದರಾಮಯ್ಯ ಅವರಲ್ಲಿ ಕಂಡಿದೆ. ಸಿದ್ದರಾಮಯ್ಯ ಅವರು ಬಡವರ ಪರವಾದ ಗಟ್ಟಿ ನಿರ್ಧಾರಗಳನ್ನು ತೆಗರದುಕೊಳ್ಳುತ್ತಾರೆ’ ಎಂದಿದ್ದಾರೆ.
ಇನ್ನು ಐದು ವರ್ಷಗಳ ಕಾಲ ಅವರು ಮುಖ್ಯಮಂತ್ರಿಯಾಗಿರಬೇಕು. ಅವರು ಹಾಗೆಯೇ ಇರುತ್ತಾರೆ ಎಂಬ ನಂಬಿಕೆ, ವಿಶ್ವಾಸ ನನಗೆ ಇದೆ. ಅವರಿಗೆ ಪೂರಕವಾಗಿ ಕಾಂಗ್ರೆಸ್ ಹೈಕಮಾಂಡ್ ಕೂಡ ಇದೆ ಎಂದಿದ್ದಾರೆ. ಈ ಹೇಳಿಕೆಗಳು ಸದ್ಯ ಕಾಂಗ್ರೆಸ್ ನ ಬಣಗಳಲ್ಲಿ ಯಾವ ರೀತಿಯಾದ ಟರ್ನಿಂಗ್ ತೆಗೆದುಕೊಳ್ಳತ್ತೋ ಏನೋ ನೋಡಬೇಕಿದೆ.