ತುಮಕೂರು: ಕಾಂಗ್ರೆಸ್ ಸರ್ಕಾರದಲ್ಲಿ ಸದ್ಯಕ್ಕೆ ಕುರ್ಚಿ ಕದನ ನಿಲ್ಲುವಂತೆ ಕಾಣಿಸುತ್ತಿಲ್ಲ. ಈ ಬಗ್ಗೆ ಹೇಳಿಕೆಗಳು ನಿಲ್ಲುತ್ತಿಲ್ಲ. ಒಂದು ಬಣ ಡಿಕೆ ಶಿವಕುಮಾರ್ ಅವರನ್ನೇ ಸಿಎಂ ಮಾಡಬೇಕು ಎಂದು ಓಡಾಡುತ್ತಿದ್ದರೆ, ಇನ್ನೊಂದು ಬಣ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಇರಲಿ ಎನ್ನುತ್ತಿದ್ದಾರೆ. ಅದರಲ್ಲೂ ಸಿಎಂ ಆಪ್ತರಾಗಿರುವ ಕೆ ಎನ್ ರಾಜಣ್ಣ ಅವರು ಹೊಸದೊಂದು ಹೇಳಿಕೆ ನೀಡಿದ್ದಾರೆ. ಸಿಎಂ ಬದಲಾವಣೆಯ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಸಿಎಲ್ಪಿ ಸಭೆಯಲ್ಲಿ ಏನೆಲ್ಲಾ ನಿರ್ಧಾರವಾಗಿದೆ ಎಂಬುದರ ಕುರಿತಾಗಿ ಮಾತನಾಡಿದ್ದಾರೆ. ಕೆ ಎನ್ ರಾಜಣ್ಣ ಹೇಳಿದ ಹೇಳಿಕೆ ಇಲ್ಲಿದೆ ನೋಡಿ.
ಎಲ್ಲಾ ಚುನಾವಣೆಗೆ ಹೋಗೋಣಾ. ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಚುನಾವಣೆಗೆ ಹೋಗಿ, ಮೆಜಾರಿಟಿ ತಗೊಂಡು ಬರೋಣಾ. ಆಗ ಅವರೇ 5 ವರ್ಷ ಮುಖ್ಯಮಂತ್ರಿ ಆಗಲಿ. ಚುನಾವಣೆಗೆ ಹೋಗಲಿ ಅಂದ್ರೆ ಏನರ್ಥ ಹೇಳಿ. ಸಿದ್ದರಾಮಯ್ಯ ಅವರನ್ನ ಎಲೆಕ್ಟ್ ಮಾಡಿರೋದು ಯಾರು..? CLP ಅಲ್ವಾ..? ಅಲ್ಲಿ ತೀರ್ಮಾನ ಆಗಬೇಕು. ಸಿಎಲ್ಪಿ ನಲ್ಲಿ ಯಾರಾದ್ರೂ ಹೇಳಿದ್ದಾರಾ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಲಿ ಅಂತ. ಯಾರಾದ್ರೂ ಕೇಳಿದ್ರೆ ಹೇಳಿ.
ಸುಮ್ಮನೆ ನಮಗೆ 30-30 ಆಗಿತ್ತು ಅಂತ ಹೇಳಿಕೊಳ್ತಾರೆ. ಎಲ್ಲಿದೆ ಅದು. ಹೇಳೋದು ಯಾರು. ಹೈಕಮಾಂಡ್ ನಲ್ಲಿ ನಾಯಕತ್ವದ ಬಗ್ಗೆ ಮಾತನಾಡಬಾರದು ಅಂತ ಹೇಳಿದ್ದಾರೆ. ಅದಕ್ಕೋಸ್ಕರ ನಾನು ಮಾತನಾಡ್ತಾ ಇಲ್ಲ. ನಮ್ಮ ವೈಯಕ್ತಿಕ ಆಶಯ ಸಿದ್ದರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿ ಆಗಿರ್ಬೇಕು. ಹೈಕಮಾಂಡ್ ಕೂಡ ಅದೇ ನಿರ್ಧಾರ ಮಾಡಿದೆ ಎಂದು ಹೇಳಿದ್ದಾರೆ. ಈ ಮೂಲಕ ಮೊದಲೇ ಏನು ನಿರ್ಧಾರವಾಗಿಲ್ವಾ ಎಂಬ ಪ್ರಶ್ನೆ ಎದುರಾಗಿದೆ.






