ಚಿತ್ರದುರ್ಗದಲ್ಲಿ ಫೆಬ್ರವರಿ 02 ರಿಂದ 05 ರವರೆಗೆ ರಾಜಗೋಪಾಲಚಾರ್ ಮೆಮೋರಿಯಲ್ ಕಪ್ ಕ್ರಿಕೆಟ್ ಪಂದ್ಯಾವಳಿ

1 Min Read

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ : ಸುವರ್ಣ ಕ್ರಿಕೆಟ್ ಕ್ಲಬ್ ಚಿತ್ರದುರ್ಗ ವತಿಯಿಂದ ದಿವಂಗತ ಎ.ರಾಜಗೋಪಾಲಚಾರ್ ಜ್ಞಾಪಕಾರ್ಥವಾಗಿ ಪ್ರಥಮ ಬಾರಿಗೆ ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಫೆ.2 ರಿಂದ 5 ರವರೆಗೆ ರಾಜಗೋಪಾಲಚಾರ್ ಮೆಮೋರಿಯಲ್ ಕಪ್ ಲೀಗ್ ಕಮ್ ನಾಕೌಟ್ ಪಂದ್ಯಾವಳಿಗಳನ್ನು ನಡೆಸಲಾಗುವುದು.

ಪ್ರಥಮ ಬಹುಮಾನ ಐವತ್ತು ಸಾವಿರ ರೂ. ಹಾಗೂ ಆಕರ್ಷಕ ಟ್ರೋಫಿ. ದ್ವಿತೀಯ ಬಹುಮಾನ ಇಪ್ಪತ್ತೈದು ಸಾವಿರ ರೂ. ಹಾಗೂ ಆಕರ್ಷಕ ಟ್ರೋಫಿಯನ್ನು ನೀಡಲಾಗುವುದು.

ಸುವರ್ಣ ಕ್ರಿಕೆಟ್ ಕ್ಲಬ್ ಸ್ಥಾಪನೆಯಾಗಿ 42 ವರ್ಷಗಳಾಗಿದ್ದು, ನಿರಂತರವಾಗಿ ಮುನ್ನಡೆಸಿಕೊಂಡು ಬಂದ ರಾಜಗೋಪಾಲಚಾರ್ ರವರ ಸ್ಮರಣಾರ್ಥವಾಗಿ ನಾಲ್ಕು ದಿನಗಳ ಕಾಲ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿದೆ.

ಫೆ. 5 ರಂದು ಸಂಜೆ 6 ಕ್ಕೆ ನಡೆಯುವ ನುಡಿನಮನ ಕಾರ್ಯಕ್ರಮದಲ್ಲಿ ಸುವರ್ಣ ಕ್ರಿಕೆಟ್ ಕ್ಲಬ್‍ನಲ್ಲಿ ಇದುವರೆವಿಗೂ ಆಡಿರುವ ಎಲ್ಲಾ ಕ್ರಿಕೆಟ್ ಪಟುಗಳು, ಅಭಿಮಾನಿಗಳು, ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಮನ ಸಲ್ಲಿಸುವಂತೆ ಎ.ರಾಜಗೋಪಾಲಚಾರ್‍ರವರ ಪುತ್ರ ಆರ್.ಮಂಜುನಾಥ್, ಸುವರ್ಣ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಎಂ.ಶಂಕರಮೂರ್ತಿ, ಉಪಾಧ್ಯಕ್ಷ ಟಿ.ನಟರಾಜ್, ರಾಘವೇಂದ್ರ, ವಿಜಯಕುಮಾರ್, ಚಿದಾನಂದ ಇವರುಗಳು ಕೋರಿದ್ದಾರೆ.

ಹೆಚ್ಚಿನ ವಿವರಗಳಿಗಾಗಿ ಮೊ: 9535826916, 8144794975, 9886771782 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *