ಅಕ್ಟೋಬರ್ 13 ರಂದು ಅದ್ದೂರಿಯಾಗಿ ರಾಜ ವೀರ ಮದಕರಿ ನಾಯಕ ಜಯಂತೋತ್ಸವ ಆಚರಣೆ : ಬಿ.ಕಾಂತರಾಜ್

1 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ,(ಸೆ.22) :  ಅಕ್ಟೋಬರ್ 13 ರಂದು ರಾಜ ವೀರ ಮದಕರಿ ನಾಯಕರವರ ಜಯಂತೋತ್ಸವವನ್ನು ಆಚರಣೆ ಮಾಡಲು ನಾಯಕ ಸಮಾಜ ತೀರ್ಮಾನ ಮಾಡಲಾಗಿದೆ ಎಂದು ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷರಾದ ಬಿ.ಕಾಂತರಾಜ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇದುವರೆವಿಗೂ ಸರಳವಾಗಿ ಆಚರಣೆ ಮಾಡಲಾಗುತ್ತಿದ್ದ ಮದಕರಿ ನಾಯಕರ ಜಯಂತೋತ್ಸವವನ್ನು ಈ ಸಾಲಿನಿಂದ ಅದ್ದೂರಿಯಾಗಿ ಆಚರಣೆ ಮಾಡಲು ತೀರ್ಮಾನ ಮಾಡಲಾಗಿದೆ. ಅಂದು ಮೆರವಣಿಗೆಯನ್ನು ಮಾಡುವುದರ ಮೂಲಕ ಮದಕರಿ ನಾಯಕರ ಜಯಂತೋತ್ಸವವನ್ನು ನಡೆಸಲಾಗುವುದು. ಇದು ಪ್ರಾರಂಭೀಕವಾಗಿ ಚಿತ್ರದುರ್ಗದಲ್ಲಿ ನಡೆಸಲಾಗುತ್ತಿದೆ ಮುಂದಿನ ದಿನಮಾನದಲ್ಲಿ ರಾಜ್ಯವ್ಯಾಪ್ತಿ ಹಬ್ಬಲಿದೆ ಎಂದರು.

ಮದಕರಿನಾಯಕರ ಜಯಂತೋತ್ಸವದ ಅಂಗವಾಗಿ ನೂತನವಾಗಿ ಮದಕರಿನಾಯಕರ ಭಾವಚಿತ್ರವನ್ನು ಮುಂದಿನ ದಿನದಲ್ಲಿ ಬೀಡುಗಡೆ ಮಾಡಲಾಗುವುದು. ಇದಕ್ಕೆ ತಯಾರಿ ನಡೆಯುತ್ತಿದೆ ಈ ಸಂಬಂದ ಇತಿಹಾಸ ಸಂಶೋಧಕರಾದ ಲಕ್ಷ್ಮಣ್ ತೆಲಗಾವಿ ಮತ್ತು ಬಿ.ರಾಜಶೇಖರಪ್ಪ ರವರ ಜೊತೆ ಹಲವಾರು ಬಾರಿ ಮಾತನಾಡಿದ್ದು ಕ್ರಿಯೇಟಿವ್ ವೀರೇಶ್ ರವರಿಂದ ರೇಖಾ ಚಿತ್ರವನ್ನು ತಯಾರು ಮಾಡಲಾಗುತ್ತಿದೆ. ನಮ್ಮ ಜಯಂತೋತ್ಸವದಲ್ಲಿ ಈ ಚಿತ್ರವನ್ನೆ ಇಡಲಾಗುವುದು ಇದು ಮುಂದಿನ ದಿನಮಾನದಲ್ಲಿ ರಾಜ್ಯಾವ್ಯಾಪ್ತಿ ಈ ಚಿತ್ರವೇ ಪ್ರಚಾರಕ್ಕೆ ಬರಬಹುದು ಎಂದು ಕಾಂತರಾಜ್ ತಿಳಿಸಿದರು.

ಮದಕರಿನಾಯಕರ ಮೇ 15 ರಂದು ಜಯಂತಿ ನಡೆಯಲ್ಲಿದ್ದು ಅಂದು ವೇದಿಕೆ ಕಾರ್ಯಕ್ರಮ ನಡೆಯಲಿದೆ ಅ. 15 ರಂದು ನಡೆಯುವ ಜಯಂತೋತ್ಸವದಲ್ಲಿ ವೇದಿಕೆ ಕಾರ್ಯಕ್ರಮ ಇರದೇ ಬರೀ ಮೆರವಣಿಗೆ ಮಾತ್ರ ನಡೆಯಲಿದೆ ಎಂದ ಕಾಂತರಾಜ್, ಈ ಕಾರ್ಯಕ್ರಮದಲ್ಲಿ ಡಿಜೆಯನ್ನು ಬಳಕೆ ಮಾಡಿಕೊಳ್ಳಲಾಗುವುದು ಜೊತೆಗೆ ವಿವಿದ ಕಲಾತಂಡಗಳು ಸಹಾ ಭಾಗವಹಿಸಲಿವೆ ಎಂದರು.

ನಾಯಕ ಸಮಾಜದ ಜಿಲ್ಲಾಧ್ಯಕ್ಷರಾದ ಎಚ್.ಜೆ.ಕೃಷ್ಣಮೂರ್ತಿ ಮಾತನಾಡಿ, ಅ.13ರ ಕಾರ್ಯಕ್ರಮವನ್ನು ಯಾರಿಂದ ಉದ್ಘಾಟನೆ ಮಾಡಿಸಬೇಕೆಂಬುದನ್ನು ಸಮಾಜದ ಮುಖಂಡರು ತೀರ್ಮಾನವನ್ನು ಮುಂದಿನ  ದಿನಮಾನದಲ್ಲಿ ಮಾಡಲಾಗುವುದು ಅಲ್ಲದೆ ಅಂದಿನ ಕಾರ್ಯಕ್ರಮಕ್ಕೆ ಮಠಾಧೀಶರು ಸಹಾ ಭಾಗವಹಿಸಲಿದ್ದಾರೆ. ಇದರ ಬಗ್ಗೆ ಮಾಹಿತಿಯನ್ನು ಮುಂದಿನ  ದಿನದಲ್ಲಿ ನೀಡಲಾಗುವುದು ಎಂದರು.

ಗೋಷ್ಟಿಯಲ್ಲಿ ನಾಯಕ ಸಮಾಜದ ಗೋಪಾಲಸ್ವಾಮಿ ನಾಯಕ್, ಸೋಮು, ಸ್ವಾಮಿ, ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *