ಚಿತ್ರದುರ್ಗದಲ್ಲಿ ಬೆಳ್ಳಂಬೆಳಿಗ್ಗೆಯೇ ಸುರಿದ ಮಳೆ ; ತಂಪಾದ ಇಳೆ, ಕೆಲವೆಡೆ ಜಿನಿಜಿನಿ ಮಳೆ

1 Min Read

 

ಸುದ್ದಿಒನ್, ಚಿತ್ರದುರ್ಗ, ನವಂಬರ್.06 : ನಗರ ಸೇರಿ ಸುತ್ತಲಿನ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆ ಸ್ವಲ್ಪ ಕಾಲ ಮಳೆಯಾಗಿದ್ದು, ಕೆಲವೆಡೆ ಜಿನಿ ಜಿನಿ ಮಳೆಯಾಗಿದೆ. ಚಳಿಗಾಲದಲ್ಲೂ ಬೇಸಿಗೆಯಂತಹ ವಾತಾವರಣದಿಂದ ಜನತೆಗೆ ತಂಪಿನ ಅನುಭವವಾಗಿದೆ.

ಮಳೆಯೇ ಮರೆತು ಹೋದಂತಾಗಿದ್ದ ಜನತೆಗೆ ಮತ್ತೆ ಮಳೆಯ ಅನುಭವವಾಗಿದೆ. ಈ ಬಾರಿ ಮುಂಗಾರು ಮತ್ತು ಹಿಂಗಾರಿನಲ್ಲಿ ವಾಡಿಕೆ ಮಳೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ. ಇಂದು ಮತ್ತು ನಾಳೆ ಮಳೆಯಾಗುವ ಸಾಧ್ಯತೆ ಇದೆ.

ಜಿಲ್ಲೆಯಲ್ಲಿ ಮೋಡಕವಿದ ವಾತಾವರಣವಿದ್ದು, ತಣ್ಣನೆಯ ಗಾಳಿ ಬೀಸುತ್ತಿದ್ದು ಮಳೆಯ ಸಾಧ್ಯತೆ ಹೆಚ್ಚಾಗಿದೆ. ಬೆಂಗಳೂರು, ರಾಮನಗರ , ಮಂಡ್ಯ ಸೇರಿದಂತೆ ವಿವಿಧ ಭಾಗಗಳಲ್ಲಿ ಒಂದಿಷ್ಟು ಮಳೆಯಾಗಿದೆ.  ರಾಜ್ಯದಲ್ಲಿ ಹವಾಮಾನ ವೈಪರೀತ್ಯದಲ್ಲಿ ಬದಲಾವಣೆಯಾಗಿದ್ದು ಮಳೆಯಾಗುವ ನಿರೀಕ್ಷೆಯಿದೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks