ಬೆಂಗಳೂರು: ಹಿಂಗಾರು ಮಳೆ ಸದ್ಯ ರೈತರ ಮೊಗದಲ್ಲಿ ಸಂತಸವನ್ನು ಅರಳಿಸುತ್ತಿದೆ. ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಮಳೆ ಸುರಿಯುತ್ತಿದೆ. ಮುಂದಿನ ಐದು ದಿನಗಳು ಮಳೆ ಮುಂದುವರೆಯಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು, ದಕ್ಷಿಣ ಮತ್ತು ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ವಿಜಯಪುರ, ದಾವಣಗೆರೆ, ಶಿವಮೊಗ್ಗ, ತುಮಕೂರಿನಲ್ಲಿ ವ್ಯಾಪಕ ಮಳೆಯಾಗಲಿದೆ.
ಉತ್ತರ ಒಳನಾಡಿನ ಜಿಲ್ಲೆಗಳಲ್ಲೂ ಉತ್ತಮ ಮಳೆಯಾಗಲಿದೆ. ಮಳೆ ಇಲ್ಲದೆ ಬೆಳೆಯೆಲ್ಲಾ ಒಣಗಿತ್ತು. ಭೂಮಿ ಬರಡಾಗುತ್ತಿತ್ತು. ಇದು ರೈತರಿಗೆ ಸಂಕಷ್ಟ ತಂದೊಡ್ಡಿತ್ತು. ಈಗ ಮಳೆ ಬಂದರೆ ರೈತರಿಗೆ ಅಷ್ಟೇನು ಲಾಭವಾಗಲ್ಲ. ಮುಂಗಾರು ಮಳರ ನಂಬಿ ಹಾಕಿದ್ದ ಬೆಳೆಯೆಲ್ಲಾ ಒಣಗಿ ಹೋಗಿದೆ. ಆದರೆ ಹಿಂಗಾರು ಚುರುಕುಗೊಂಡಿರುವ ಕಾರಣ ತರಕಾರಿ, ಸೊಪ್ಪು ಬೆಳೆಯಲು ಅನುಕೂಲವಾಗಲಿದೆ. ದನಕರುಗಳಿಗೂ ಕುಡಿಯುವ ನೀರಿ, ಆಹಾರಕ್ಕೆ ತೊಂದರೆಯಾಗುವುದಿಲ್ಲ.